

ತಿಕೋಟಾ: ಬಬಲೇಶ್ವರ ತಾಲೂಕಿನ ರೈತರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ತಿಕೋಟಾ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ, ತಾಲೂಕು ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಮಕಬುಲ ಖೀಜಿ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳೆರಡೂ ಕೈಕೊಟ್ಟು ಬೆಳೆಯು ಸಂಪೂರ್ಣ ನಷ್ಟವಾದ ಹಿನ್ನೆಲೆ ವಿಪತ್ತು ನಿರ್ವಹಣಾ ಕಾನೂನಿನಡಿ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್ಗೆ 8500 ಮತ್ತು ಕೇಂದ್ರದ 8500 ಸೇರಿ ಗರಿಷ್ಠ 2 ಹೆಕ್ಟೇರ್ಗೆ ಪರಿಹಾರ ಮೊತ್ತ ನೀಡಬೇಕು. ಆದರೆ, ಕೇಂದ್ರ ಸರ್ಕಾರ ನೀಡಿದ ಪರಿಹಾರದಲ್ಲಿಯೇ 2000 ಕಡಿತ ಮಾಡಿರುವುದು ಖಂಡನೀಯವಾಗಿದೆ.
ದನ್ನು ಕೂಡಲೇ ರಾಜ್ಯದ 2000 ಸಾವಿರ ಮತ್ತು ಕೇಂದ್ರ 8500 ಸಾವಿರ ರೂ. ಸೇರಿಸಿ ಒಟ್ಟಾರೆ 10,500 ಸಾವಿರ ರೂ. ಗಳು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.
ಹೊರಗುತ್ತಿಗೆ ಮೂಲಕ ಬೇಜವಾಬ್ದಾರಿಯಿಂದ ಬರಗಾಲ ಪರಿಹಾರ ಸಮೀೆ ಸರಿಯಾಗಿ ಮಾಡದೇ, ತಮ್ಮ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈತೊಳೆದುಕೊಂಡಿದ್ದಾರೆ, ಆದರೆ ನಿಜವಾಗಿ ತಾಲೂಕಿನ ಎಲ್ಲ ನಷ್ಟವಾದ ರೈತರಿಗೆ ಪರಿಹಾರ ನೀಡಬೇಕು. ಇಲ್ಲವೆ, ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಕೂಡಲೇ ಪರಿಹರಿಸಿ ಎಲ್ಲ ರೈತರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಉಪಾಧ್ಯಕ್ಷ ರಾಜುಗೌಡ ಬಿರಾದಾರ ಮಾತನಾಡಿ, ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಪರಿಕರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಸಂಗ್ರಹಿಸಬೇಕು. ಅಲ್ಲದೆ, ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಾಲೂಕಿನಲ್ಲಿ ವಿಜೆಲೆನ್ಸ್ ತಂಡವನ್ನು ಜಾಗೃತಗೊಳಿಸಿ ಕಾರ್ಯರೂಪಕ್ಕೆ ತರುವಂತೆ ಆಗ್ರಹಿಸಿದರು.
ರೈತ ಮುಖಂಡ ರಾಮು ಕಾಖಂಡಕಿ ಮಾತನಾಡಿ, ರೈತರ ಮತ್ತಿತರರ ಸಮಸ್ಯೆಗಳಿಗೆ ತ್ವರಿತವಾಗಿ ಬಗೆಹರಿಸುವಂತೆ ಒತ್ತಾಯಿಸಿದರು.
ಲಾಲಸಾಬ ಕಮತೆ, ಹಸನಸಾಬ ಖೀಜಿ, ಶ್ರೀಶೈಲ ಬಿರಾದಾರ, ಪೈಂಗಬರ ಪಟೇಲ, ಲಕ್ಕಪ್ಪ ಸೊನ್ನದ, ಕಾಶಿನಾಥ ಡೋಂಗಿ, ಹೋಳೆಪ್ಪ ಬೂದಿಹಾಳ ಮತ್ತಿತರರಿದ್ದರು.