ಬೆಳೆ ಹಾನಿಗೆ ಪರಿಹಾರ ವಿತರಣೆಗೆ ಒತ್ತಾಯ

Demand to distribute compensation for crop damage
Published on

ಹಿರೇಕೆರೂರ: ಬೆಳೆ ಹಾನಿ ಜಂಟಿ ಸಮೀೆ, ಪರಿಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ತಾಲೂಕು ಟಕದಿಂದ ಪಟ್ಟಣದ ತಹಸೀಲ್ದಾರ್​ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ತಾಲೂಕಿನಲ್ಲಿ ಸತತ ಮೂರು ವರ್ಷದಲ್ಲಿ ಅತಿವೃಷ್ಟಿ, ಬರಗಾಲಕ್ಕೆ ತುತ್ತಾಗಿ ರೈತ ಸಮೂಹ ನಲುಗಿ ಹೋಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಫಸಲಿಗೆ ಬಂದಿದ್ದ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ. ಕೂಡಲೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

2023-24ನೇ ಸಾಲಿನ ಬೆಳೆ ವಿಮೆಯಲ್ಲಿ ಭಾರಿ ತಾರತಮ್ಯ ನಡೆದಿದ್ದು, ತಾಲೂಕು ಮತ್ತು ಜಿಲ್ಲಾಡಳಿತ ಮರುಪರಿಶೀಲನೆ ನಡೆಸಿ ಬಾಕಿ ಇರುವ ವಿಮಾ ಹಣ ಮಂಜೂರು ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ಸಂರ್ಪೂಣವಾಗಿ ನಾಶಗೊಂಡಿದ್ದು, ವಿಮಾ ಕಂಪನಿಯಿಂದ ಶೇ. 25ರಷ್ಟು ಮಧ್ಯಂತರ ಪರಿಹಾರ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೃಷಿ ಸಲಕರಣೆಗೆ ಸಹಾಯಧನ ಕಡಿತಗೊಳಿಸಿರುವುದು ಸರಿಯಲ್ಲ. ಒಬ್ಬ ರೈತನಿಗೆ 1 ಲಕ್ಷ ರೂಪಾಯಿ ಮಾತ್ರ ನಿಗದಿ ಮಾಡಿದ್ದು, ಕೃಷಿ ಸಾಮಗ್ರಿಗಳಿಗೆ ಸಹಾಯಧನ ಹೆಚ್ಚಿಸಬೇಕು. ಹೆಸ್ಕಾಂ ಹೊಸ ಪಂಪ್​ಸೆಟ್​ಗಳಿಗೆ ಅಜಿರ್ ತಗೆದುಕೊಳ್ಳುವುದನ್ನು ನಿಲ್ಲಿಸಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಹೊಸ ಪಂಪ್​ಸೆಟ್​ಗಳಿಗೆ ವಿದ್ಯುತ್​ ಪೂರೈಸಲು ಅನುಮತಿ ಕೊಡಬೇಕು ಹಾಗೂ ಅಕ್ರಮ ಸಕ್ರಮ ಯೋಜನೆಗೆ ಹಣ ತುಂಬಿದ ರೈತರಿಗೆ ಕಂಬ, ತಂತಿ, ಟಿ.ಸಿ. ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್​ ಎಚ್​. ಪ್ರಭಾಕರಗೌಡ ಅವರ ಮೂಲ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಲಿಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಮಾಲತೇಶ ಪೂಜಾರ, ಗಂಗನಗೌಡ ಮುದಿಗೌಡ್ರ, ಮಹ್ಮದಗೌಸ್​ ಪಾಟೀಲ, ಎಚ್​.ಎಚ್​. ಮುಲ್ಲಾ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಗಿ, ಶಾಂತನಗೌಡ ಪಾಟೀಲ, ಶಂಕ್ರಪ್ಪ ಮಕ್ಕಳ್ಳಿ, ನವೀನ ಹುಲ್ಲತ್ತಿ, ಗುರುಶಾಂತ ಬಸರೀಹಳ್ಳಿ, ಯಶವಂತ ತಿಮಕಾಪುರ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net