ಮಣಿಪುರ ಸರ್ಕಾರ ವಜಾಗೊಳಿಸಲು ಆಗ್ರಹ

31 ಎಸ್ಕೆಪಿ_ 1
ಸುರೇಶ್ ಟಿ ಅರಳಿಹಳ್ಳಿ ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.ಎಸ್.ಈಶ್ವರಪ್ಪ, ತಾಳಗುಂದ ಮಹೇಶ್, ಡಿಎಸ್‌ಎಸ್ ಜೆ.ಚಂದ್ರಪ್ಪ, ಸುರೇಶ್ ನಿಂಬೆಗೊಂದಿ, ರಾಮಪ್ಪ ಗುಡ್ಡದ ತುಮ್ಮಿನಕಟ್ಟೆ, ಲೋಕೇಶ್ ಇದ್ದರು.
Published on

ಶಿಕಾರಿಪುರ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹೆಚ್ಚುತ್ತಿದ್ದು ಅಲ್ಲಿನ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲು ವಿಫಲವಾಗಿದೆ ಎಂದು ಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಬಳ್ಳಿಗಾವಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಟಿ.ಅರಳಿಹಳ್ಳಿ ಆರೋಪಿಸಿದರು.

ಜನಾಂಗೀಯ ಸಂಘರ್ಷದಲ್ಲಿ ಕೆಲವರು ಮಾನವೀಯತೆ ಮರೆತು ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ಮೆರವಣಿಗೆ ಮಾಡಿರುವುದು ಅವಮಾನಕರ. ಆದರೂ ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಮತ್ತು ಸಚಿವರು ಕಠಿಣ ಕಾನೂನು ಕ್ರಮಕೈಗೊಳ್ಳದಿರುವುದು ಖಂಡನೀಯ. ಕೂಡಲೆ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಈ ಮೂಲಕ ಅಮಾಯಕ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೃಷಿ ಭೂಮಿ ಉಳಿಸಿ ಸಮಿತಿ ಅಧ್ಯಕ್ಷ ಡಿ.ಎಸ್.ಈಶ್ವರಪ್ಪ ಮಾತನಾಡಿ, ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳು ಧ್ವಂಸವಾಗಿವೆ. ಜನ ಓಡಾಡಲು ಭಯಗೊಂಡಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ರೈತರು ಕೆಲಸ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಂಡರೂ ಕಾಣದಂತೆ ಜಾಣ ಮೌನ ವಹಿಸಿದೆ ಎಂದು ಆಪಾದಿಸಿದರು. ತಾಳಗುಂದ ಮಹೇಶ್, ಡಿಎಸ್‌ಎಸ್ ಜೆ.ಚಂದ್ರಪ್ಪ, ಸುರೇಶ್ ನಿಂಬೆಗೊಂದಿ, ರಾಮಪ್ಪ ಗುಡ್ಡದ ತುಮ್ಮಿನಕಟ್ಟೆ, ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net