ಉದ್ಯಾನ ಅಭಿವೃದ್ಧಿಪಡಿಸಲು ಆಗ್ರಹ

5 byd 2
Published on

ಬ್ಯಾಡಗಿ: ಪುರಸಭೆ ವ್ಯಾಪ್ತಿಯಲ್ಲಿ ಮಾದರಿ ಉದ್ಯಾನ ನಿರ್ವಿುಸಲು ಬಜೆಟ್​ನಲ್ಲಿ ಅನುದಾನ ಮೀಸಲಿಡುವ ಮೂಲಕ ವಾರ್ಡ್​ಗಳಲ್ಲಿ ಉದ್ಯಾನಗಳ ರಕ್ಷಣಾ ಸಮಿತಿ ರಚಿಸುವ ಮೂಲಕ ಪರಿಸರ ಹಾಗೂ ಗಿಡಮರಗಳನ್ನು ಕಾಪಾಡುವಂತೆ ಆಗ್ರಹಿಸಿ ಪರಿಸರಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಹುಲ್ಲತ್ತಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೌಡ ಅವರಿಗೆ ಮನವಿ ಸಲ್ಲಿಸಿದರು

ಬಳಿಕ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್​ಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಉದ್ಯಾನಗಳಿದ್ದು, ಎಲ್ಲವೂ ಸಮರ್ಪಕವಾಗಿ ಅಭಿವೃದ್ಧಿ ಕಂಡಿಲ್ಲ. ಪ್ರತಿ ಬಾರಿ ಬಜೆಟ್​ನಲ್ಲಿ ಲಕ್ಷಾಂತರ ರೂ. ಮೀಸಲಿಟ್ಟು ಬಳಕೆ ಮಾಡಲಾಗುತ್ತಿದ್ದು, ಎಲ್ಲ ಉದ್ಯಾನಗಳಿಗೆ ಅಲ್ಪಸ್ವಲ್ಪ ಅನುದಾನ ಖರ್ಚು ಮಾಡುವ ಬದಲಾಗಿ, ಪ್ರತಿವರ್ಷವೂ ಎರಡೂ ಉದ್ಯಾನ ಆಯ್ಕೆ ಮಾಡಿಕೊಂಡು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net