

ರಾಯಚೂರು ಶಾಲಾ ಪರವಾನಿಗೆ ಪಡೆದುಕೊಂಡು ಅನಽಕೃತವಾಗಿ ವಸತಿ ಶಾಲೆ ನಡೆಸುತ್ತಿರುವವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಕಾರ್ಯಕರ್ತರು ಡಿಡಿಪಿಐ ಡಾ.ಕೆ.ಡಿ.ಬಡಿಗೇರರಿಗೆ ಮನವಿ ಸಲ್ಲಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿರುವ ಅಕ್ರಮ ಹಾಗೂ ಅನಽಕೃತ ಶಾಲೆಗಳು, ವಸತಿ ಶಾಲೆಗಳು ಹಾಗೂ ಬೇಸಿಗೆ ಶಿಬಿರಗಳು, ಕೋಚಿಂಗ್ ಕೇಂದ್ರಗಳನ್ನು ಬಂದ್ ಮಾಡಬೇಕು. ಕನ್ನಡ ಮಾಧ್ಯಮ ಶಾಲೆ ಅನುಮತಿ ಪಡೆದು ಅಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಲಾಗುತ್ತಿದ್ದು ಕ್ರಮಕ್ಕೆ ಮುಂದಾಗಬೇಕೆAದು ಆಗ್ರಹಿಸಿದರು.
ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಒಂದೇ ಕೊಠಡಿಯಲ್ಲಿ ಎರಡೆರಡು ವರ್ಗಗಳನ್ನು ನಡೆಸಲಾಗುತ್ತಿದೆ. ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅಽಕ ಶಾಲಾ ಶುಲ್ಕ ಪಡೆಯುತ್ತಿದ್ದಾರೆ.
ನಗರದಲ್ಲಿ ಅಕ್ರಮ ಕೋಚಿಂಗ್ ಕೇಂದ್ರಗಳು ತಲೆ ಎತ್ತಿದ್ದು, ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಬೇಸಿಗೆ ಶಿಬಿರ ಹೆಸರಿನಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕೇವಲ ಎರಡು ತಿಂಗಳಿಗೆ ೩ ಸಾವಿರ ರೂ.ಯಿಂದ ೭ ಸಾವಿರ ರೂ. ಶುಲ್ಕ ಭರಿಸಿಕೊಳ್ಳುತ್ತಿದ್ದಾರೆ ಎಂದು ಅಪಾದಿಸಿದ್ದಾರೆ
. ಎಲ್ಲಾ ಅಕ್ರಮ ಅನಽಕೃತ ಶಾಲೆಗಳು, ವಸತಿ ಶಾಲೆಗಳು, ಬೇಸಿಗೆ ಶಿಬಿರ ನಡೆಸುವ ಅನಽಕೃತ ಕೇಂದ್ರಗಳ ಮೇಲೆ ದಾಳಿ ಮಾಡಿ ಕೂಡಲೇ ಬಂದ್ ಮಾಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಕೆ.ಕೊಂಡಪ್ಪ, ಜಿಲ್ಲಾ ಉಪಾಧ್ಯಕ್ಷ ಮಹೇಶ ಪಟೇಲ್, ಆಟೋ ಚಾಲಕರ ಘಟಕದ ಉಪಾಧ್ಯಕ್ಷ ರಘುನಾಥ, ಈರಣ್ಣ, ಮಲ್ಲು, ಮೌನೇಶ, -Áರೂಕ್ ಸೇರಿದಂತೆ ಅನೇಕರು ಇದ್ದರು.