ಹಂದಿ ಸಾಕಾಣಿಕೆ ಜಾಗ ತೆರವುಗೊಳಿಸಲಿ: ಬೊಕ್ಕೆಗೌಡನದೊಡ್ಡಿ ಮಹಿಳೆಯರಿಂದ ಮನವಿ

Demand to clear pig farming land Mandya
Published on

ಮಂಡ್ಯ: ತಾಲೂಕಿನ ಬೊಕ್ಕೆಗೌಡನದೊಡ್ಡಿಯಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್‌ಗೆ ಮನವಿ ಪತ್ರ ಸಲ್ಲಿಸಿದರು.

ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೊಕ್ಕೆಗೌಡನದೊಡ್ಡಿ ಗ್ರಾಮದ ಅಂಚಿನಲ್ಲಿಯೇ ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಕೆಟ್ಟ ವಾಸನೆ, ರೋಗ ಹಾಗೂ ಹಂದಿಗಳ ಕಾಟ, ನಾಯಿಗಳ ಉಪಟಳ ಹೆಚ್ಚಾಗಿದೆ ತಕ್ಷಣವೇ ಸಾಕಾಣಿಕೆದಾರರಿಗೆ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿದರು.

ಗ್ರಾಪಂ ಮೂಲಕ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ. ಅಲ್ಲದೆ ಕಳೆದ ವರ್ಷ ಕೆರಗೋಡು ಗ್ರಾಮದಲ್ಲಿ ನಡೆದ ಶಾಸಕರ ನೇತೃತ್ವದ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ನೀಡಿ ಗಮನ ಸೆಳೆಯಲಾಗಿತ್ತು. ಆದರೂ ಸಹ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಕೆ.ಗೌಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೂಡ ಗ್ರಾಮಸ್ಥರ ಆರೋಗ್ಯ ಹಿತದೃಷ್ಟಿಯಿಂದ ಹಂದಿ ಸಾಕಾಣಿಕೆ ಜಾಗವನ್ನು ತೆರವುಗೊಳಿಸುವಂತೆ ಸೂಚನಾ ಪತ್ರ ನೀಡಿದ್ದರೂ ಹಾಗೂ ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಹಂದಿ ಸಾಕಾಣಿಕೆ ಮಾಡಬಾರದೆಂಬ ಕಾನೂನು ನಿಯಮವಿದೆ. ಆದರೂ ನಿಯಮ ಉಲ್ಲಂಘಿಸಿರುವುದು ಕೂಡ ಕಂಡು ಬಂದಿದೆ. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಸೂಚನಾ ಪತ್ರ ನೀಡಿ ತೆರವುಗೊಳಿಸಲು 15 ದಿನದ ಗಡುವು ನೀಡುವಂತೆ ಸೂಚನೆ ನೀಡಿದರು.

ಗ್ರಾಮದ ಶಿವಲಿಂಗಮ್ಮ, ಕೆಂಪಮ್ಮ, ಲೀಲಾವತಿ, ಶೋಭಾ, ಸಾಕಮ್ಮ, ಸುನಿತಾ, ದೊಡ್ಡತಾಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net