ಒಣಗಿದ ಮರಗಳನ್ನು ತೆರವುಗೊಳಿಸಲು ಆಗ್ರಹ

Demand to clear dry trees
Published on

ಗುಳೇದಗುಡ್ಡ: ಪಟ್ಟಣದಿಂದ ಬಾಗಲಕೋಟೆಗೆ ತೆರಳುವ ರಸ್ತೆಯಲ್ಲಿ ನೀಲಗಿರಿ ಮರಗಳು ಒಣಗಿ ನಿಂತಿದ್ದು, ರಸ್ತೆ ಮೇಲೆ ಬೀಳುವ ಅಪಾಯವಿದೆ. ಆದ್ದರಿಂದ ತಕ್ಷಣ ತೆರವುಗೊಳಿಸಬೇಕು ಎಂದು ವಾಹನ ಸವಾರರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಅನಾಹುತ ಸಂಭವಿಸುವ ಮೊದಲೇ ಅರಣ್ಯ ಇಲಾಖೆಯವರು ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net