

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿಯ ಹಳೆ ರೈಲ್ವೇ ಮೇಲ್ಸೇತುವೆ ಮೇಲಿದ್ದ ಅಶೋಕ ಸ್ತಂಭಗಳು ಧರೆಗುರುಳಿ ಹಲವು ವರ್ಷಗಳು ಕಳೆದಿದ್ದು, ರಾಷ್ಟ್ರೀಯ ಲಾಂಛನದ ಬಗ್ಗೆ ಇಲಾಖೆ ರ್ನಿಲಕ್ಷ$್ಯಕ್ಕೆ ಸಾರ್ವಜನಿಕರು ಆಕ್ಷೇಪವ್ಯಕ್ತಪಡಿಸಿದ್ದಾರೆ.
1993ರಲ್ಲಿ ಹಳೆ ಸೇತುವೆ ನಿಮಾರ್ಣದ ಸಮಯದಲ್ಲಿಯೇ ಸ್ತಂಭಗಳನ್ನು ರಚಿಸಲಾಗಿದ್ದು, ಇದೀಗ ಶಿಥಿಲಗೊಂಡ ರಾಷ್ಟ್ರಲಾಂಛನದ ಅವಶೇಷಗಳನ್ನು ಹೆದ್ದಾರಿಯ ಸನಿಹದ ಪೊದೆಗಳಲ್ಲಿ ಎಸೆದಿರುವುದು ಕಂಡುಬಂದಿದೆ. ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೇ ಇಲಾಖೆ ತಕ್ಷಣ ಅಶೋಕ ಸ್ತಂಭಗಳನ್ನು ಹೊಸದಾಗಿ ನಿರ್ಮಿಸಿ ಸೇತುವೆಗೆ ಜೋಡಿಸಬೇಕು ಎಂದು ನಾಗರಿಕ ಸಮಿತಿ ಪ್ರ.ಕಾ. ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
ಭಾರತ ಸರ್ಕಾರ 1950 ರಲ್ಲಿ ಅಧಿಕೃತವಾಗಿ ಸಾರಾನಾಥದ ಅಶೋಕ ಸ್ತಂಭದ ನಾಲ್ಕು ಸಿಂಹಗಳುಳ್ಳ, ಲಾಂಛನವನ್ನು ರಾಷ್ಟ್ರೀಯ ಲಾಂಛನವಾಗಿ ಸ್ವೀಕರಿಸಿತ್ತು. ಭಾರತದ ಶಕ್ತಿ, ನ್ಯಾಯ, ಶಾಂತಿ, ಮತ್ತು ಸಹಿಷ್ಣುತೆಯ ಸಂದೇಶ ಸಾರುವ ಪವಿತ್ರ ಲಾಂಛನ ರಸ್ತೆ ಬದಿ ಬಿದ್ದಿರುವುದು ರ್ನಿಲಕ್ಷ$್ಯದ ಪರಮಾವಧಿಯಾಗಿದೆ.