ಪಿಓಪಿ ಗಣೇಶ ಮೂರ್ತಿ ಮಾರಾಟ ನಿಷೇಧಿಸಲು ಆಗ್ರಹ

Demand to ban the sale of POP Ganesha idols
ಕೋಟೆಕಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಮಾರಾಟಗೊಳ್ಳುತ್ತಿರುವ ಪಿಓಪಿ ಗಣೇಶಮೂರ್ತಿಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರು ಪಿಡಿಓ ಜಿ.ಎಂ. ಕಾಳಗಿ ಅವರಿಗೆ ಮನವಿ ಸಲ್ಲಿಸಿದರು. ಉಮೇಶ ಶಿವನಗೌಡರ, ಸಂತೋಷ ಚಿತ್ರಗಾರ, ಮಂಜುನಾಥ ಬಡಿಗೇರ ಇತರರಿದ್ದರು.
Published on

ಗುಳೇದಗುಡ್ಡ: ಕೋಟೆಕಲ್ಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಿಓಪಿಯಿಂದ ಗಣೇಶಮೂರ್ತಿಗಳನ್ನು ತಯಾರಿಸುತ್ತಿರುವುದನ್ನು ನಿರ್ಬಂಧಿಸುವಂತೆ ಗುಳೇದಗುಡ್ಡದ ಮಣ್ಣಿನ ಗಣೇಶ ಮೂರ್ತಿ ತಯಾರಕರು ಗ್ರಾಪಂ ಪಿಡಿಓ ಜಿ.ಎಂ. ಕಾಳಗಿ ಅವರಿಗೆ ಮನವಿ ಸಲ್ಲಿಸಿದರು.

ಹಲವಾರು ವರ್ಷಗಳಿಂದ ನಾವು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದೇವೆ. ಪಿಓಪಿ ಗಣೇಶ ಮೂರ್ತಿಗಳ ಹಾವಳಿಯಿಂದ ನಮ್ಮ ವ್ಯಾಪಾರ ಕುಂಠಿತಗೊಳ್ಳುತ್ತಿದೆ.

ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರೂ ಹೊರಗಿನಿಂದ ತರಿಸಿ ಕೋಟಿಕಲ್ಲ ಗ್ರಾಮದ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕೂಡಲೇ ಇಂತಹ ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸಿ ವಶಪಡಿಸಕೊಳ್ಳಬೇಕು ಎಂದು ಉಮೇಶ ಶಿವನಗೌಡರ, ಸಂತೋಷ ಚಿತ್ರಗಾರ, ಮಂಜುನಾಥ ಬಡಿಗೇರ ಮತ್ತಿತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net