ದಸರಾದಲ್ಲಿ ಕರೋಕೆ ನಿಷೇಧಿಸಲು ಒತ್ತಾಯ

28
Published on

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಸರಾ ಉತ್ಸವದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರೋಕೆ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮೈಸೂರು ಕಲಾವಿದರ ಅಸೋಸಿಯೇಷನ್, ಕಲಾ ಬಳಗಗಳ ಒಕ್ಕೂಟದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಪರಂಪರೆ ಇದೆ. ಆದರೆ ಅನೇಕ ವೇದಿಕೆಗಳಲ್ಲಿ ಕರೋಕೆ ಬಳಸುತ್ತಿದ್ದಾರೆ. ಯುವ ದಸರಾ, ಯುವ ಸಂಭ್ರಮ, ಅರಮನೆ ವೇದಿಕೆ ಮತ್ತು ಇನ್ನಿತರ ಮುಖ್ಯ ವೇದಿಕೆಗಳಲ್ಲಿಯೇ ಕರೋಕೆ ಬಳಸುತ್ತಿರುವುದು ಖಂಡನೀಯ. ಈ ಕರೋಕೆ ಬಳಕೆ ಮೈಸೂರಿನ ಪಾರಂಪರಿಕ ಇತಿಹಾಸ ಹಾಳು ಮಾಡುತ್ತಿದೆ. ಮೈಸೂರು ಹಾಗೂ ದಸರಾಗೆ ದೊಡ್ಡ ಕಳಂಕ ತಂದೊಡ್ಡಿದೆ. ಇದರೊಂದಿಗೆ ನೈಜ ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಅಲ್ಲದೇ, ಮೈಸೂರಿನ ಪ್ರತಿಭೆಗಳಿಗೆ ಹಾಗೂ ಕಲಾವಿದರಿಗೆ ಅವಕಾಶ ನೀಡದೆ ಇರುವುದು ಖಂಡನೀಯ ಎಂದು ಕಿಡಿ ಕಾರಿದರು.


ಮೈಸೂರು ಕಲಾವಿದರ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗುರುದತ್, ಅಧ್ಯಕ್ಷ ರಘುನಾಥ್, ಕಲಾವಿದರಾದ ಷಣ್ಮುಗ, ರೋಶನ್ ಸೂರ್ಯ, ರಾಜೇಶ್ ಪಡಿಯಾರ್, ರವಿಕಿರಣ್, ಬಾಲಣ್ಣ, ಸೌಭಾಗ್ಯ ಪ್ರಭು, ವಿನ್ಸೆಂಟ್, ಪ್ರದೀಪ್ ಗಾಂಧಿನಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net