

ಹುಬ್ಬಳ್ಳಿ: ಮೈಸೂರಿನ ಉದಯಗಿರಿಯಲ್ಲಿ ದಾಂಧಲೆ ಮಾಡಿದ ಜಿಹಾದಿ ಮನಸ್ಥಿತಿಯ ಮುಸ್ಲಿಮರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಜೈ ಭೀಮ ಯುವ ಸಂಘದ ಪದಾಧಿಕಾರಿಗಳು, ನಗರದ ತಹಸೀಲ್ದಾರ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡುತ್ತಿರುವ ಮತಾಂಧರನ್ನು ಕೂಡಲೇ ಬಂಧಿಸಬೇಕು. ಹೀಗೆ ಮಾಡುತ್ತಿರುವುದ ಇದು ಮೊದಲಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಳೇ ಹುಬ್ಬಳ್ಳಿಯಲ್ಲಿಯೂ ಇಂಥ ಘಟನೆಗಳು ನಡೆದಿವೆ. ಪೊಲೀಸರೆಂದರೆ ಇವರಿಗೆ ಭಯವಿಲ್ಲ. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಮನವಿಯನ್ನು ತಹಸೀಲ್ದಾರ್ ಮೂಲ ಪ್ರಧಾನಿ ಅವರಿಗೆ ರವಾನಿಸಲಾಯಿತು.
ಅಲ್ಲದೇ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಾಸಕನ ಮಗ ಬಸವೇಶನ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು.
ಸಂಘದ ಗೌರವಾಧ್ಯಕ್ಷ ವಿಶ್ವನಾಥ ಬೂದೂರ, ಮಹಾನಗರ ಅಧ್ಯಕ್ಷ ಪರಶುರಾಮ ದಾವಣಗೆರೆ, ಉಪಾಧ್ಯಕ್ಷ ರಾಜು ತೇರದಾಳ, ಇತರರು ಇದ್ದರು.