ವಕೀಲ ರಾಕೇಶ್‌ನನ್ನು ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

raichur
raichur
Published on

ರಾಯಚೂರು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲ ರಾಕೇಶ್‌ನನ್ನು ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬುಧವಾರ ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟಗಳಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ತಮ್ಮ ಕೋರ್ಟ್ ಸಭಾಂಗಣದಲ್ಲಿ ಕಲಾಪ ನಡೆಸುವ ಸಂದರ್ಭದಲ್ಲಿ ಮನುವಾದಿ ರಾಕೇಶ್ ಕೀಶೋರ ವಕೀಲ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಬೂಟನ್ನು ಎಸೆದಿದ್ದು, ಕೂಡಲೇ ಬಂಧಿಸಿ ದೇಶದ್ರೋಹಿ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ವಕೀಲ ವೃತ್ತಿಯಲ್ಲಿದ್ದುಕೊಂಡು ಭಾರತದ ಸಂವಿಧಾನಕ್ಕೆ ಮತ್ತು ನ್ಯಾಯಾಂಗಕ್ಕೆ ಮಾಡಿದ ಘೋರ ಅವಮಾನವಾಗಿದೆ. ಇಂತಹ ವಿಕೃತ ಮನಸು ಉಳ್ಳವರನ್ನು ಗಲ್ಲಿಗೆ ಹಾಕಬೇಕೆಂದು ಕಿಡಿ ಕಾರಿದರು.

ದಲಿತ ಸಂಘಟನೆಗಳ ಮುಖಂಡ ಎಂ.ವಿರೂಪಾಕ್ಷಿ ಮಾತನಾಡಿ, ದಲಿತ ಸಮುದಾಯ ವ್ಯಕ್ತಿ ಉನ್ನತ ಸ್ಥಾನದಲ್ಲಿ ನ್ಯಾಯಮೂರ್ತಿಗಳಾಗಿದ್ದನ್ನು ಸಹಿಸದ ಮನುವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ, ಆರ್‌ಎಸ್‌ಎಸ್ ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದಲಿತರ ಮೇಲೆ, ದೇಶದ ಸಂವಿಧಾನಕ್ಕೆ ಮಾಡಿರುವ ಅವಮಾನವಾಗಿದೆ ಎಂದರು.

ಮನುವಾದಿಗಳ ಅಟ್ಟಹಾಸವನ್ನು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಖಂಡಿಸುತ್ತಿದೆ, ಉನ್ನತ ಮಟ್ಟದಲ್ಲಿದ್ದ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಿದ್ದು, ಇನ್ನು ಸಾಮಾನ್ಯ ದಲಿತರಿಗೆ ರಕ್ಷಣೆ ಮಾಡಲು ಹೇಗೆ ಸಾಧ್ಯ, ಕೂಡಲೇ ಇಂತಹ ಮನುವಾದಿಯನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘದ ಮುಖಂಡರ‌್ದಾ ರವೀಂದ್ರನಾಥ್ ಪಟ್ಟಿ, ಎಂ.ಆರ್. ಭೇರಿ, ರವಿಕುಮಾರ ರಾಂಪೂರು, ವಿಜಯರಾಣಿ, ತಮ್ಮಣ್ಣ ವಕೀಲ, ವೈ. ನರಸಪ್ಪ, ಮಾರೆಪ್ಪ ಹರವಿ, ಖಾಜಾ ಅಸ್ಲಂ ಅಹಮದ್, ಹನುಮಂತ ಮನ್ನಾಪೂರ, ಆಂಜನೇಯ ಕುರುಬದೊಡ್ಡಿ, ನರಸಿಂಹಲು,ಶಿವಕುಮಾರ ಮ್ಯಾಗಳ ಮನಿ ಸೇರಿದಂತೆ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net