ಪರಿಶಿಷ್ಟರಿಗೆ ನಿವೇಶನ ನೀಡುವಂತೆ ಪಟ್ಟು

Untitled-2
ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣವಾದ ನಿವೇಶನಗಳನ್ನು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಹಂಚಬೇಕೆಂದು ಒತ್ತಾಯಿಸಿ ಮಾದಿಗ ಜನಾಂಗದ ಸದಸ್ಯರು ಕೋರಮಂಗಲ ಗ್ರಾಪಂ ಅಧ್ಯಕ್ಷ ಧನಂಜಯ್​ ಅವರಿಗೆ ಮನವಿ ಸಲ್ಲಿಸಿದರು. ನಾಯಕ ಜನಾಂಗದ ಮುನಿರಾಜಪ್ಪ ಇದ್ದರು.
Published on

ವಿಜಯಪುರ : ಕೋರಮಂಗಲ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ಯೋಜನೆಯಡಿ ಸರ್ವೇ ನಂ.218ರಲ್ಲಿ 8 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ 218 ನಿವೇಶನಗಳಲ್ಲಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಕೇವಲ 10 ನಿವೇಶನಗಳನ್ನು ಮಾತ್ರ ನೀಡಿದ್ದಾರೆ, ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಮಾದಿಗ ಜನಾಂಗ ಇದ್ದು, ಪ್ರತಿ ಕುಟುಂಬಕ್ಕೊಂದರಂತೆ ನಿವೇಶನ ಹಂಚಬೇಕೆಂದು ಮಾದಿಗ ಜನಾಂಗದ ಸದಸ್ಯರು ಒತ್ತಾಯಿಸಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ, ಕೋರಮಂಗಲ ಗ್ರಾಪಂ ಅಧ್ಯಕ್ಷ ಧನಂಜಯ್​ ಅವರಿಗೆ ಮನವಿ ಸಲ್ಲಿಸಿದರು.

ವಕೀಲರು ಬಹುಜನ ಸಮಾಜ ಪಾರ್ಟಿಯ ತಾಲೂಕು ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ನಮ್ಮಲ್ಲಿ ಮಾದಿಗ ಜನಾಂಗದ ನೂರಕ್ಕೂ ಹೆಚ್ಚು ಕುಟುಂಬಗಳಿದ್ದು, ಪ್ರತಿ ಕುಟುಂಬದಲ್ಲಿ ಅವಿಭಕ್ತ ಕುಟುಂಬವಾಗಿ ಐದು ಆರು ಮಂದಿ ವಾಸಿಸುತ್ತಿದ್ದಾರೆ. ಅದರಲ್ಲಿಯೂ ಬಹಳಷ್ಟು ಮಂದಿ ಅನಕ್ಷರಸ್ಥರು, ಬಡಕೂಲಿ ಕಾರ್ಮಿಕರಾಗಿದ್ದು, ನಿವೇಶನಗಳಿಲ್ಲದೆ ಒಟ್ಟಾಗಿಯೇ ಜೀವನ ಸಾಗಿಸುವಂತಹ ಪರಿಸ್ಥಿತಿ ಇದ್ದು ಇದೀಗ ನೀಡುತ್ತಿರುವ ನಿವೇಶನಗಳಲ್ಲಿ ಮಾದಿಗ ಜನಾಂಗಕ್ಕೆ ಹೆಚ್ಚಾಗಿ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಒಕ್ಕಲಿಗ ಜನಾಂಗದ ನಾರಾಯಣಸ್ವಾಮಿ ಮಾತನಾಡಿ, ಈ ಹಿಂದೆ ನಿವೇಶನಗಳನ್ನು ನೀಡಿದ ಸಂದರ್ಭದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಾದಿಗ ಜನಾಂಗದ ಕುಟುಂಬಗಳಿಗೆ, ಬೇರಾರಿಗೂ ನೀಡದೆ ನಿವೇಶನಗಳನ್ನು ನೀಡಿದ್ದು, ಇದೀಗ ಮತ್ತೆ ಅವರಿಗೆ ಅರ್ಧಕ್ಕಿಂತ ಹೆಚ್ಚು ನಿವೇಶನಗಳನ್ನು ನೀಡಲು ಗುರುತಿಸಿದ್ದು, ಹೀಗೆ ಆದಲ್ಲಿ ಇತರೆ ಜನಾಂಗಗಳಲ್ಲಿರುವ ಬಡವರಿಗೆ ಏನನ್ನು ನೀಡುತ್ತಾರೆ. ಈ ರೀತಿ ಮಾಡುವುದಕ್ಕಿಂತ ಯಾರಿಗೂ ನಿವೇಶನ ಹಂಚುವುದೇ ಬೇಡ ಗ್ರಾಮದಲ್ಲಿ ಸಾರ್ವಜನಿಕರು ಯಾರಾದರೂ ನಿಧನ ಹೊಂದಿದಲ್ಲಿ ಮಣ್ಣು ಮಾಡಲು ಜಾಗ ಇಲ್ಲದೆ ಬೇರೆಯವರ ಜಮೀನಿನಲ್ಲಿ ಕಾಡಿಬೇಡಿ ಮಣ್ಣು ಮಾಡಬೇಕಿದೆ ಎಂದು ಆಕ್ರೋಶ್​ ವ್ಯಕ್ತಪಡಿಸಿದರು.

ಕೋರಮಂಗಲ ಗ್ರಾಪಂ ಅಧ್ಯಕ್ಷ ಧನಂಜಯ್​ ಮಾತನಾಡಿ, ಅಧ್ಯಕ್ಷರಾದ ತಾವೇ ಮುಂದೆ ನಿಂತು ಹೋರಾಟ ನಡೆಸಿ, 8 ಎಕರೆ ಜಮೀನಿನಲ್ಲಿ 210 ನಿವೇಶನಗಳನ್ನು ವಿಂಗಡಿಸಿದ್ದು, ಅದರಲ್ಲಿ ಸಿಎ ನಿವೇಶನಗಳಾಗಿ 20 ನಿವೇಶನ ಹೊರತುಪಡಿಸಿ 190 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಅದರಲ್ಲಿ ಅರ್ಧದಷ್ಟು ನಿವೇಶನಗಳನ್ನು ಎಸ್ಸಿ&ಎಸ್ಟಿ ಜನಾಂಗಕ್ಕೆ ನೀಡುತ್ತಿದ್ದು, ಉಳಿದ ಅರ್ಧದಷ್ಟು ನಿವೇಶನಗಳನ್ನು ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದರು. 8 ಎಕರೆ ಪಕ್ಕದಲ್ಲಿಯೇ ಇನ್ನೂ ನಾಲ್ಕು ಎಕರೆ ಜಮೀನಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸಹ ನಿವೇಶನಗಳಾಗಿ ಪರಿವರ್ತನೆ ಮಾಡಿ ನೀಡಲಾಗುವುದೆಂದು ಆದಾಗ್ಯು ಈ ಹಿಂದೆ 1991-&92ರಲ್ಲಿ 34 ಮಂದಿ ಮಾದಿಗ ಜನಾಂಗಕ್ಕೆ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net