ಕಾನೂನು ಶಾಶ್ವತವಾಗಿ ಹಿಂತೆಗೆದುಕೊಳ್ಳಲು ಆಗ್ರಹ

Demand that the law be withdrawn forever
Published on

ಮಡಿಕೇರಿ:

ವನ್ಯಜೀವಿ ಉತ್ಪನ್ನಗಳನ್ನು ಹಿಂತಿರುಗಿಸುವ ಸರ್ಕಾರದ ಆದೇಶಕ್ಕೆ ಈಗ ತಾತ್ಕಾಲಿಕ ತಡೆಯಾಜ್ಞೆ ಮಾತ್ರ ಸಿಕ್ಕಿದ್ದು, ಈ ಕಾನೂನನ್ನು ಸರ್ಕಾರ ಶಾಶ್ವತವಾಗಿ ಹಿಂತೆಗೆದುಕೊಳ್ಳುವAತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದ್ದಾರೆ.

ವನ್ಯಜೀವಿ ಉತ್ಪನ್ನಗಳನ್ನು 3 ತಿಂಗಳ ಒಳಗೆ ಸರ್ಕಾರಕ್ಕೆ ಹಿಂತಿರುಗಿಸುವAತೆ ಸರ್ಕಾರ ಸೂಚಿಸಿ ಆದೇಶಿಸಿತ್ತು. ಆದರೆ ಈ ಆದೇಶಕ್ಕೆ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಉಚ್ಛನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ತಡೆ ನೀಡಿದೆ. ಆದರೆ ತಡೆಯಾಜ್ಞೆ ಕೇವಲ ತಾತ್ಕಾಲಿಕವಾಗಿದೆ. ಹೀಗಾಗಿ ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸರ್ಕಾರದ ಗಮನ ಸೆಳೆದು ಈ ಕಾನೂನನ್ನು ಶಾಶ್ವತವಾಗಿ ಹಿಂಪಡೆಯಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೊಡಗಿನಲ್ಲಿ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ಬಾಂಧವ್ಯ ಉತ್ತಮ ರೀತಿಯಲ್ಲಿ ಇದೆ. ಕಾರ್ಮಿಕರನ್ನು ಕಾಫಿ ಬೆಳೆಗಾರರು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಆದರೆ ಕಾಫಿ ಬೆಳೆಗಾರರು ಕಾರ್ಮಿರನ್ನು ಜೀತಕ್ಕೆ ಇಟ್ಟುಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬೆಳೆಗಾರರ ಮೇಲೆ ಮಾತ್ರ ಈ ಆರೋಪ ಯಾಕೆ ಎನ್ನುವುದು ಅರ್ಥ ಆಗುತ್ತಿಲ್ಲ ಇದು ಖಂಡನೀಯ ಎಂದರು.

ಪಕ್ಷದ ಪ್ರಮುಖರಾದ ಮಹೇಶ್ ಜೈನಿ, ತಳೂರು ಕಿಶೋರ್ ಕುಮಾರ್, ವಿ.ಕೆ. ಲೋಕೇಶ್, ಮನುಮಂಜುನಾಥ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net