ಶ್ರೀ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಆಗ್ರಹ

hbr (4)
Published on

ಹೆಬ್ರಿ: ಮೂರು ದಶಕಗಳ ಹಿಂದೆ ಅಂಚೆ ಕಚೇರಿ ಕಟ್ಟಡಕ್ಕೆ ಮೀಸಲಾಗಿರಿಸಿ ಗಡಿ ಗುರುತು ಮಾಡಿರುವ ಹೆಬ್ರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ 25 ಸೆಂಟ್ಸ್ ನಿವೇಶನವನ್ನು ಇತ್ತೀಚೆಗೆ ಮರು ಸರ್ವೆಗೆ ಜಾಗ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ ತಕರಾರಿಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಗುರುತಿಸಿರುವ ನಿವೇಶನದಲ್ಲಿ ಶೀಘ್ರವೇ ಅಂಚ ಕಚೇರಿ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿದರು.

ನಿವೇಶನ ಸಂಬಂಧ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸರ್ವೆ ಮತ್ತು ಅಂಚೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಅದು ಇಲಾಖೆಗೆ ಸೇರಿದ ಜಾಗವೆಂದು ಆಕ್ಷೇಪಿಸಿದರು. ಹೆಬ್ರಿ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ, ಪ್ರಗತಿಪರ ಹೋರಾಟ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಗ್ರಾಮಸ್ಥರೊಂದಿಗೆ ತೆರಳಿ ಅಂಚೆ ಇಲಾಖೆಯೊಂದಿಗಿನ ತಕರಾರು ಬಗೆಹರಿಸಿ ಶೀಘ್ರವೇ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ನಿವೇಶನ ಮಂಜೂರಾಗಿ ಅನೇಕ ವರ್ಷಗಳಾಗಿದ್ದರೂ ತಾಲೂಕು ಕೇಂದ್ರವಾದ ಹೆಬ್ರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಚೆ ಕಚೇರಿ ಕಾರ್ಯಾಚರಿಸುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net