

ಸಿಂದಗಿ: ವಸತಿ ಯೋಜನೆಯಡಿ ಪುರಸಭೆಯಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯದ ಬದಲಾಗಿ ಅನ್ಯ ಸಮುದಾಯಗಳ ಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಾ.ಪ್ರದಿಪಕುಮಾರ ಹಿರೇಮಠ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯ ಅಶೋಕ ಅಲ್ಲಾಪುರ, ಬಿಜೆಪಿ ಮಂಡಲ ಅಧ್ಯ ಸಂತೋಷ ಪಾಟೀಲ, ಎಸ್ಟಿ ಮೋರ್ಚಾ ಅಧ್ಯ ಪ್ರಶಾಂತ ಕದ್ದರಕಿ, ಸಾಯಬಣ್ಣ ದೇವರಮನಿ ಇತರರು ಮಾತನಾಡಿ, ಪಟ್ಟಣದ ಪುರಸಭೆ ಅನೇಕ ಆವಾಂತರಗಳನ್ನು ಮಾಡುತ್ತಲೇ ಬಂದಿದೆ.
ನಗರಕ್ಕೆ ಸರ್ಕಾರದಿಂದ ದಕ್ಕಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆಯಡಿ 750 ಮನೆಗಳಿಗೆ ಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಇತರ ಜಾತಿಯವರಿಗೆ ಮಣೆ ಹಾಕಿರುವುದರ ಕುರಿತು ತನಿಖೆ ನಡೆದಿದೆ.
ಠರಾವಿನಲ್ಲಿ ನಮೂದಿಸಿರುವ ಲಾನುಭವಿಗಳೇ ಬೇರೆ ಆನ್ಲೈನ್ನಲ್ಲಿ ಆಯ್ಕೆಗೊಂಡ ಲಾನುಭವಿಗಳೇ ಬೇರೆ ಬೇರೆಯಾಗಿದ್ದಾರೆ. ನೇರವಾಗಿ ಸಾಮಾನ್ಯ ವರ್ಗದವರನ್ನೇ ಲಾನುಭವಿಗಳಾಗಿಸಿರುವ ಪ್ರಕರಣವನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ ಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಬಿ.ಆರ್.ಯಂಟಮಾನ, ಎಂ.ಪಿ.ಬಾದನ, ವಿನಾಯಕ ದೇವರಮನಿ, ವಿಠ್ಠಲ ನಾಯ್ಕೋಡಿ, ಶಂಕರಲಿಂಗ ಬಮ್ಮನಹಳ್ಳಿ, ಶಿವು ಸೋಂಪುರ, ಅಲೋಕ ರೋಡಗಿ ವಿವಿಧ ಮೋರ್ಚಾಗಳ ಅಧ್ಯರು, ಇತರ ಪದಾಧಿಕಾರಿಗಳಿದ್ದರು.