ಬೇಡಿಕೆ ಈಡೇರಿಸದಿದ್ದರೆ ಧರಣಿ

8-DVD-3
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ಕಾರ್ಯದರ್ಶಿ ಭಾವಸಾಬ್, ಪ್ರಮುಖರಾದ ಪರಶುರಾಮ್, ರುದ್ರಪ್ಪ, ಮಹಾದೇವಪ್ಪ ಇತರರಿದ್ದರು.
Published on

ದೇವದುರ್ಗ: ಬೆಳೆ ಸಮೀಕ್ಷೆಯಿಂದ ಮುಕ್ತಿ, ಪ್ರಯಾಣ ಭತ್ಯೆ ಹೆಚ್ಚಳ, 25 ಲಕ್ಷ ರೂ. ಜೀವವಿಮೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘ ಶನಿವಾರ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿತು.

ಕಂದಾಯ ಇಲಾಖೆಯ ಮೊಬೈಲ್ ವೆಬ್ ತಂತ್ರಾಂಶಗಳು ನೌಕರರ ಜೀವಹಿಂಡುತ್ತಿವೆ. ತಂತ್ರಾಂಶ ನಿಗದಿಗೆ ಮೊಬೈಲ್ ಸಾಧನ, ಲ್ಯಾಪ್‌ಟಾಪ್, ಇಂಟರ್‌ನೆಟ್, ಸ್ಕಾೃನರ್‌ಗಳನ್ನು ನೀಡದ ಕಾರಣ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಆಧಾರ್ ಸೀಡ್, ಲ್ಯಾಂಡ್‌ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ನಿರ್ವಹಣೆಗೆ ತೊಂದರೆಯಾಗಿದೆ. ಕಂದಾಯ ನೌಕರರ ಮೇಲೆ ದಾಳಿ ನಡೆಸಿದರೂ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕಂದಾಯ ನೌಕರರಿಗೆ ಬೆಳೆ ಸರ್ವೇ, ಪರಿಹಾರ ಸಮೀಕ್ಷೆಯಿಂದ ಮುಕ್ತಿನೀಡಿ ಆ ಕೆಲಸವನ್ನು ತೋಟಗಾರಿಕೆ, ಕೃಷಿ ಇಲಾಖೆಗೆ ನೀಡಬೇಕು. ಕರ್ತವ್ಯವೇಳೆ ಅನಾಹುತವಾದರೆ 25 ಲಕ್ಷ ರೂ. ಪರಿಹಾರ ನೀಡಬೇಕು. ಎಲ್ಲ ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು.

ಪೊಲೀಸ್ ಇಲಾಖೆಯಂತೆ 13ತಿಂಗಳ ವೇತನ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಫೆ.10ರಿಂದ ಕೆಲಸ ಬಹಿಷ್ಕರಿಸಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ಕಾರ್ಯದರ್ಶಿ ಭಾವಸಾಬ್, ಪ್ರಮುಖರಾದ ಪರಶುರಾಮ್, ರುದ್ರಪ್ಪ, ಮಹಾದೇವಪ್ಪ, ರೇವಣಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net