ಬೇಡಿಕೆ ಈಡೇರಿಕೆಗೆ ಪೌರಕಾರ್ಮಿಕರ ಒತ್ತಾಯ

31blh1 protest
Published on

ಬೈಲಹೊಂಗಲ: ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅರ್ನಿದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಪುರಸಭೆ ನೌಕರರು ಹಾಗೂ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಎಸಿ ಪ್ರಭಾವತಿ ಕೀರಪುರಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪುರಸಭೆ ಮುಂಭಾಗದಲ್ಲಿ ಪೌರಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ೂಷಣೆ ಕೂಗಿದರು. ಪುರಸಭೆಯಿಂದ ಎಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ರಾಜ್ಯದ ಎಲ್ಲ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಪೌರ ಕಾರ್ಮಿಕರಿಗೂ ಒದಗಿಸಬೇಕು. ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರನ್ನು ನೇರ ಪಾವತಿಗೆ ಒಳಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ನೌಕರರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ರೇವತಿ ಆರ್​., ಐ.ಜಿ.ಮಹಾಳಂಕ, ಬಸನಗೌಡ ಪಾಟೀಲ, ಬಿ.ಐ.ಗುಡಿಮನಿ, ಮಹಾದೇವಿ ನಟಕಟ್ಟಿನ, ಬಿ.ಎ.ಮಠದ, ಎಸ್​.ಎನ್​.ಪಾಟೀಲ, ಎ.ವೈ.ಹೆಗಡೆ, ಸುರೇಶ ದುರದುಂಡಿ, ಬಿ.ಎ.ಖಾನಪ್ಪನವರ, ಸಂತೋಷ ನರಗುಂದ, ಡಿ.ಎಂ.ಖಲೀಫ್​, ಲ$್ಮ ಮಾದರ, ಸೋನಾಲಿ ಬುಬನಾಳೆ, ಸೋಮನಿಂಗ ದೊಡವಾಡ, ಗಿರೀಶ ಜಿಗಜಿನ್ನಿ, ವಿನಾಯಕ ತೋಟಗಿ, ರುದ್ರಯ್ಯ ಚಿಕ್ಕಮಠ, ಅಶೋಕ ಹುಲ್ಲೆನ್ನವರ, ಬಸವರಾಜ ನೇಸರಗಿ, ಸಿದ್ರಾಮ ತಟವಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net