ಬೇಡಿಕೆ ಈಡೇರಿಸಲು ಆಗ್ರಹ

13Khanapur2-WEb
ಡಾ.ಬಾಬಾಸಾಹೇಬ ಅಂಬೇಡ್ಕರ್ ವಾಸವಿದ್ದ ಮನೆ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಾನಾಪುರದ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮಹಾರಾಷ್ಟ್ರದ ಸಿಎಂ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಾಗರ ಅಷ್ಟೇಕರ, ವಕೀಲ ಆಕಾಶ ಅಥಣಿಕರ, ಜ್ಞಾನೇಶ್ವರ ಹಾವನುರ, ಸುರೇಶ ಖಾನಾಪುರಿ, ಮೋಹನ ಶಿಂಗಾಡೆ, ಇತರ ಪದಾಧಿಕಾರಿಗಳಿದ್ದರು.
Published on

ಗೋಕಾಕ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಅಂಗನವಾಡಿ ಕೇಂದ್ರಗಳು ಮತ್ತು ನೌಕರರಿಗೆ ಕರೊನಾ ಸಂರಕ್ಷಣೆಗಾಗಿ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಬೇಕು. ನೌಕರರಿಗೆ 50 ಲಕ್ಷ ಜೀವವಿಮೆ ನೀಡಬೇಕು. ಕರೊನಾ ಸೋಂಕಿತರಾದಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು. 25 ಸಾವಿರ ಪ್ರೋತ್ಸಾಹಧನ, ಬಸ್‌ಪಾಸ್ ಹಾಗೂ ಊಟದ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಎಲ್‌ಐಸಿ ಆಧಾರಿತ ನಿವೃತ್ತಿ ವೇತನ ನೀಡಬೇಕು. ಮೇಲ್ವಿಚಾರಕಿಯರಿಗೆ ಸೇವಾ ಹಿರಿತನದ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಮುಂಗಡವಾಗಿ ಮೊಟ್ಟೆ ಬಿಲ್, ಬಾಡಿಗೆ, ಗ್ಯಾಸ್, ಗೌರವಧನ ನೀಡಬೇಕು. ಗುತ್ತಿಗೆ ನೌಕರರನ್ನು ಪೂರ್ಣ ಅವಧಿಗೆ ನೇಮಕಾತಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ದೊಡ್ಡವ್ವ ಪೂಜೇರಿ, ಜಿ.ಬಿ.ಪಾಟೀಲ, ಎಂ.ಎಂ.ಮುಲ್ಲಾ, ಮಡ್ಡೆಪ್ಪ ಭಜಂತ್ರಿ, ಕಲ್ಲಪ್ಪ ಮಾದರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net