

ಬೈಲಹೊಂಗಲ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಮರು ಪರಿಶೀಲಿಸುವಂತೆ ಒತ್ತಾಯಿಸಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮುದಾಯ, ಹಿಂದು ಹಾಗೂ ಕನ್ನಡಪರ ಸಂಘಟನೆಗಳಿಂದ ಪಟ್ಟಣದಲ್ಲಿ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕಾಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾತನಾಡಿ, ಯತ್ನಾಳ ಅವರು ಲಿಂಗಾಯತ ಸಮುದಾಯ ಹಾಗೂ ಹಿಂದು ಧರ್ಮದ ಆಸ್ತಿಯಾಗಿದ್ದಾರೆ. ಭವಿಷ್ಯದಲ್ಲಿ ರಾಜ್ಯದ ಸಿಎಂ ಆಗಲಿದ್ದಾರೆ. ಹೀಗಾಗಿ, ಬಿಜೆಪಿಯಿಂದ ಅವರನ್ನು ಉಚ್ಚಾಟಿಸಿರುವುದು ಖಂಡನೀಯ. ಕೂಡಲೇ ಉಚ್ಚಾಟನೆ ಮರುಪರಿಶೀಲಿಸಿ ಯತ್ನಾಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಮುಖಂಡ ಮಹೇಶ ಹರಕುಣಿ ಮಾತನಾಡಿ, ಪ್ರಾಮಾಣಿಕ ಹೋರಾಟಗಾರ ಬಸನಗೌಡ ಪಾಟೀಲ ಯತ್ನಾಳರಂಥಹ ಹಿಂದುತ್ವದ ಹೋರಾಟಗಾರರಿಗೆ ಅನ್ಯಾಯವಾಗಿದೆ. ಏ.13 ರೊಳಗೆ ಬಿಜೆಪಿ ತನ್ನ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂದು ಎಚ್ಚರಿಸಿದರು.
ಮುಖಂಡರಾದ ಸಿ.ಕೆ.ಮೆಕ್ಕೇದ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಗಂಗಪ್ಪ ಗುಗ್ಗರಿ, ರಾಜು ಸೊಗಲ, ಗಂಗಾಧರ ಹೋಟಿ, ಮಲ್ಲಿಕಾರ್ಜುನ ಹುಂಬಿ, ಪ್ರಕಾಶ ಹುಂಬಿ, ಶಿವಾನಂದ ಕೋಲಕಾರ, ಗಿರೀಶ ಹರಕುಣಿ ಮಾತನಾಡಿದರು.
ಶಿವಾನಂದ ಬಡ್ಡಿಮನಿ, ಮಹಾಂತೇಶ ಗುಂಡ್ಲೂರ, ಶಿವಾನಂದ ಬೆಳಗಾವಿ, ಈಶ್ವರ ಕೊಪ್ಪದ, ಮಹಾಂತೇಶಗೌಡ ಪಾಟೀಲ, ಅಶೋಕ ಗುಂಡ್ಲೂರ, ಧೂಳಪ್ಪ ಇಟಗಿ, ರಿತೇಶ ಪಾಟೀಲ, ಶಶಿಕುಮಾರ ಪಾಟೀಲ, ರಾಘು ಶೀಗಿಹಳ್ಳಿ, ಪರಪ್ಪ ಬಾಳಿಕಾಯಿ, ಅಶ್ವಿನ ಇಂಗಳಗಿ, ಸಿದ್ಧಾರೂಢ ಹೊಂಡಪ್ಪನವರ, ಶಿವು ಶಿರಸಂಗಿ, ರವಿ ಸಿದ್ಧನಗೌಡರ, ಮಂಜು ಅಮ್ಮಿನಭಾವಿ, ಅಭಿಷೇಕ ಕಲಾಲ, ಸುನೀಲ ಈಟಿ ಇತರರಿದ್ದರು.