

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ. ಆದರೆ ಪಕ್ಷದ ವರಿಷ್ಠರು ಸ್ವಲ್ಪ ಕಷ್ಟಕರ ಎಂದು ಸುಳಿವು ಕೊಟ್ಟಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಪಕ್ಷ ಇಂಡಿಯಾ ಒಕ್ಕೂಟದಲ್ಲಿದ್ದು, ಸೀಟು ಹಂಚಿಕೆ ಬಗ್ಗೆ ಒಕ್ಕೂಟದ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಶಕ್ತಿಯಿದ್ದರೂ ಪಕ್ಷಕ್ಕೆ 13 ಸೀಟು ಬಿಟ್ಟುಕೊಡಲಾಗಿದೆ ಎಂದರು.
ವಿಧಾನಸಭೆಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದವರು ಯಾರೇ ಆಗಲಿಸಿ ಅವರಿಗೆ ಕಠಿಣ ಶಿಕ್ಷಣ ಕೊಡಬೇಕು. ದೇಶದ್ರೋಹಿ ಅಂತ ತೀರ್ಮಾನ ಮಾಡಿ ಆಚೆ ಹಾಕಬೇಕು. ಈಗಿನ ಸರ್ಕಾರವಾಗಲಿ ಹಿಂದಿನ ಸರ್ಕಾರವಾಗಲಿ ಎರಡಕ್ಕೂ ನಾನು ಮೆಚ್ಚುಗೆ ಕೊಡುವುದಿಲ್ಲ. ಎರಡು ಪಕ್ಷದ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮವನ್ನು ಕೆದಕುವ ಕೆಲಸ ಮಾಡುತ್ತಿವೆ.
ರಾಜ್ಯದಲ್ಲಿ ಯಾವುದೆ ಅಭಿವೃದ್ಧಿಯಿಲ್ಲ. ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ವಿಚಾರದಲ್ಲಿ ದಂಧೆ ಶುರುವಾಗಿದೆ. ನೀರು ಕೊಡಬೇಕಾದ ಸರ್ಕಾರ ಗುತ್ತಿಗೆದಾರರ ಲಾಬಿಗೆ ಮಣಿಯುತ್ತಿದೆ. ಕಾಂಗ್ರೆಸ್, ಬಿಜೆಪಿಯವರಿಗೆ ಜನರ ನೆಮ್ಮದಿ ಮುಖ್ಯವಲ್ಲ. ಬೇಕಿಲ್ಲದಿದ್ದರೂ 150 ಶಾಸಕರಿಗೆ ಕ್ಯಾಬಿನೆಟ್ ರ‌್ಯಾಂಕ್ ಹುದ್ದೆ ಸೃಷ್ಟಿ ಮಾಡಿದ್ದಾರೆ.
ಬಿಜೆಪಿಯವರು 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಅಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಬಿಜೆಪಿಯೇತರ ಸರ್ಕಾರಗಳನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿವೆ. ಸಿಬಿಐ, ರಾ, ಇಡಿಯನ್ನು ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದೆ. ಇಂದಹ ಸರ್ಕಾರ ಮುಂದೆ ಬಂದರೆ ಸರ್ವಾಕಾರ ಸರ್ಕಾರವಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿ ಬಳ್ಳಾರಿಯ ಎನ್.ಪ್ರತಾಪರೆಡ್ಡಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸೋಲುಂಡಿದ್ದೇನೆ. ವಿದ್ಯಾವಂತ ಮತದಾರರು ಮತ ಚಲಾಯಿಸುವಾಗ ಮಾಡುವ ತಪ್ಪುಗಳು ಅದಕ್ಕೆ ಕಾರಣ.
ಚುನಾವಣೆ ಆಯೋಗ ಮತ್ತು ಜಿಲ್ಲಾಡಳಿತ ಪದವೀಧರರಿಗೆ ಮತದಾನದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು. ಪಕ್ಷೇತರನಾಗಿ ಸ್ಪರ‌್ಸುತ್ತಿದ್ದು, ಆಮ್ ಆದ್ಮಿ ಸೇರಿದಂತೆ ಇನ್ನಿತರರು ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.