

ಆನೇಕಲ್ : ಕಾರ್ಮಿಕ ವಿರೋಧಿಯಾಗಿರುವ ಕರಾಳ ಲೇಬರ್ ಕೋಡ್ಗಳ ವಾಪಸ್ಗೆ ಆಗ್ರಹಿಸಿ ಸಿಐಟಿಯು ವತಿಯಿಂದ ಪಟ್ಟಣದಲ್ಲಿ ಬುಧವಾರ ಮುಷ್ಕರ ನಡೆಸಲಾಯಿತು. ಗುಲಾಮಗಿರಿಗೆ ತಳ್ಳಲಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, ಕಾರ್ಮಿಕ ಕಾನೂನುಗಳಲ್ಲಿ ಕೆಲಸ ಅವಧಿ ಹೆಚ್ಚಳ ಸೇರಿ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜೆಸಿಟಿಯು ಮತ್ತು ಎಸ್.ಕೆ.ಎಂ. ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಮಾತನಾಡಿ, ದೇಶದಲ್ಲಿ ದುಡಿಯುವ ಜನತೆ ಹೋರಾಟ, ತ್ಯಾಗಬಲಿದಾನಗಳಿಂದ ಪಡೆದಿರುವ ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ 2020ರಲ್ಲಿ ರದ್ದುಪಡಿಸಿ ನಾಲ್ಕು ಸಂಹಿತೆಗಳನ್ನು ಕಾಪೋರ್ರೇಟ್ ಬಂಡವಾಳ ಹೂಡುವವರ ಪರವಾಗಿ ರೂಪಿಸಿ ಜಾರಿಮಾಡಲು ಹೊರಟಿದೆ. ಕಾರ್ಮಿಕ ವಿರೋಧಿಯಾದ ಈ ನಾಲ್ಕು ಸಂಹಿತೆಗಳು 8 ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಜೀವನಯೋಗ್ಯ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ, ಮುಷ್ಕರದ ಹಕ್ಕು, ಸಂಕಟ್ಟುವ ಹಕ್ಕು, ಬೋನಸ್, ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ನವಗುಲಾಮಗಿರಿಗೆ ದೂಡಲಿದೆ ಎಂದರು.
ಕೇಂದ್ರ ಸರ್ಕಾರ ಈ ಸಂಹಿತೆಗಳ ಜಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳ ಮೂಲಕ ಜಾರಿಗೆ ಮುಂದಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಕಾರ್ಮಿಕ ಕಾನೂನುಗಳಲ್ಲಿ ಕೆಲಸ ಅವಧಿ ಹೆಚ್ಚಳ ಸೇರಿ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಸಿಐಟಿಯು ತಾಲೂಕು ಅಧ್ಯ ಪಿ.ಸುರೇಶ್ ಹೇಳಿದರು.
ಬೆಲೆ ಏರಿಕೆ ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತಕ್ಕೆ ಎರಡು ಸರ್ಕಾರಗಳು ಮುಂದಾಗುತ್ತಿಲ್ಲ. ಬಸ್, ರೈಲ್ವೆ, ಮೆಟ್ರೋ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಲಾಗುತ್ತಿದೆ. ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನ ಮಾಸಿಕ 36000 ರೂಪಾಯಿ ನಿಗದಿ ಪಡಿಸಲು ಸರ್ಕಾರಗಳು ತಯಾರಿಲ್ಲ. ಆದರೆ ಕಾಪೋರ್ರೇಟ್ ಬಂಡವಾಳಗಾರಿಗೆ ಜನರ ತೆರಿಗೆ ಹಣದಲ್ಲಿ ಭರಪೂರ ಕೊಡುಗೆಗಳನ್ನು ಮೋದಿ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳು ನೀಡುತ್ತಿವೆ ಎಂದರು.
ಪ್ರಜಾಪ್ರಭುತ್ವ ವಿರೋಧಿ : ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಖಾತ್ರಿಗೆ ಶಾಸನ ರೂಪಿಸಿ ಕೃಷಿ ರಸುವ ಬದಲಾಗಿ ವಿವಿಧ ಯೋಜನೆಗಳ ಹೆಸರಿನಲ್ಲಿ ಬಂಡವಾಳಗಾರರಿಗೆ ನೀಡಲು ರೈತರಿಂದ ಬಲವಂತದ ಭೂಸ್ವಾಧಿನ ಮಾಡಲಾಗುತ್ತಿದೆ. ಬಹುಸಂಖ್ಯಾತ ಅಸಂಟಿತ ಕಾರ್ಮಿಕರಿಗೆ ಸಾಮಾಜಿಕ ಸುರತೆ ಕಲ್ಪಿಸುವ ಬದಲಾಗಿ ಇರುವ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ರ್ನಿಬಂಧಿಸಿ ಫ್ರೀಡಂ ಪಾರ್ಕ್ಗೆ ಸೀಮಿತಗೊಳಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಿಐಟಿಯು ತಾಲೂಕು ಅಧ್ಯ ಪಿ.ಸುರೇಶ್ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿಯಾದ ಲೇಬರ್ ಕೋಡ್ಗಳ ಜಾರಿ ನಿಲ್ಲಿಸಿ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ದುಡಿಯುವ ಜನತೆಯ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದರು.