ಕೃಷಿ ಸಚಿವರ ವಜಾಕ್ಕೆ ಒತ್ತಾಯ

CTD------2
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಸಮರ್ಪಕ ಪೂರೈಕೆ ಖಂಡಿಸಿ ಹಾಗೂ ಆರೋಪ- ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡುತ್ತಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ರೈತರು ಚಿತ್ರದುರ್ಗ ತಾಲೂಕು ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಗೊಬ್ಬರ ಪೂರೈಕೆ ಕೊರತೆಯಿಂದ ಬೆಳೆ ಇಳುವರಿ ಕುಂಠಿತಗೊಂಡು ರೈತರು ನಷ್ಟ ಅನುಭವಿಸುವಂತಾಗಿದೆ. ಸಮರ್ಪಕವಾಗಿ ಗೊಬ್ಬರ ಪೂರೈಸಲು ವಿಫಲವಾದ ಕೃಷಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ರೈತ, ಕೃಷಿ ವಿರೋಧಿ ಕಾನೂನು ಹಿಂಪಡೆಯಬೇಕು. ಹಿಂದಿನ ಸಾಲಿನಲ್ಲಿ ನಾನಾ ಬೆಳೆ ವಿಮೆ ಪರಿಹಾರ ಮಂಜೂರು ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸಬಾರದು. ತಾಲೂಕು ಕಚೇರಿಗಳಲ್ಲಿ ರೈತರ ಅರ್ಜಿಗಳ ಶೀಘ್ರ ವಿಲೇಗೆ ಕ್ರಮ ವಹಿಸಬೇಕು. ಅಗತ್ಯ ಪ್ರಮಾಣದಲ್ಲಿ ಯೂರಿಯಾ ಪೂರೈಸಬೇಕು. ಮಳೆಯಿಂದ ಹಾನಿಗೆ ಒಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ತಹಸೀಲ್ದಾರ್ ಗೋವಿಂದರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಕಬ್ಬಿಗೆರೆ ನಾಗರಾಜ್, ಬಾಗೇನಾಳ ತಿಪ್ಪೇಸ್ವಾಮಿ, ಕಾಂತರಾಜ್, ಕೊಟ್ರಬಸಪ್ಪ, ಕಾಂತರಾಜ್ ಹುಣಸೆಕಟ್ಟೆ, ಮಾಲತೇಶ್, ಮಾರುತಿ, ನಾಗರಾಜ್‌ರೆಡ್ಡಿ, ಮಂಜುನಾಥ್, ರಾಜಶೇಖರ್, ಜಯಣ್ಣ, ಇಸ್ಮಾಯಿಲ್, ಅಂಜಿನಪ್ಪ, ಸಂಜೀವಣ್ಣ, ರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net