ನಗರಸಭೆಯ ಏಕಪಕ್ಷೀಯ ನಿರ್ಣಯ ರದ್ದತಿಗೆ ಒತ್ತಾಯ

12 ckm 4
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಸಾಮಾನ್ಯ ಸಭೆಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಣಯಗಳನ್ನು ರದ್ಧತಿ ಮಾಡಬೇಕು ಎಂದು ಒತ್ತಾಯಿಸಿದರು. ಟಿ.ರಾಜಶೇಖರ್, ಕವಿತಾ ಶೇಖರ್, ಅರುಣ್‌ಕುಮಾರ್, ಮಧುಕುಮಾರ್ ರಾಜ್ ಅರಸ್, ಸುಜಾತಾ ಶಿವಕುಮಾರ್, ರೂಪಾಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರ ಸಭೆಯಲ್ಲಿ ಪ್ರತಿ ವಿಷಯಕ್ಕೆ ಅನುಮೋದನೆ ಪಡೆದು ಮಂಜೂರಾತಿ ನೀಡಬೇಕೆಂಬ ಸಂವಿಧಾನಾತ್ಮಕವಾದ ಹಕ್ಕನ್ನು ನಗರಸಭೆ ಅಧ್ಯಕ್ಷರು ಗಾಳಿಗೆ ತೂರಿದ್ದಾರೆ. ಹೀಗಾಗಿ ಎರಡು ದಿನದ ಹಿಂದೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಣಯಗಳನ್ನು ರದ್ಧತಿ ಮಾಡಬೇಕು ಎಂದು ನಗರಸಭೆಯ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಗರಸಭೆ ಬಿಜೆಪಿ ಸದಸ್ಯ ಟಿ.ರಾಜಶೇಖರ್ ಜು. ೧೦ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸರಿಯಾಗಿ ಸಭೆ ನಡೆಸದೆ, ವಿಷಯ ಚರ್ಚಿಸದೆ ೧ರಿಂದ ೬೮ ವಿಷಯಗಳಿಗೆ ಅನುಮೋದನೆ ದೊರೆತಿದೆ ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಬದ್ಧವಾದ ಕಾನೂನು ಗೌರವಿಸುವ ಅಧಿಕಾರಿಗಳು ಅಧ್ಯಕ್ಷರೊಂದಿಗೆ ಕೈಜೋಡಿಸಿರುವುದು ಬೇಸರದ ಸಂಗತಿ. ಪೌರಾಯುಕ್ತರು ಸಮ್ಮತಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಉಳಿದ ೧೦ ದಿನದ ಅಧಿಕಾರವಧಿಯಲ್ಲಿ ೧೨ ಕೋಟಿ ರೂ. ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಲು ಅಧ್ಯಕ್ಷರು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಪ್ರತಿಪಕ್ಷ ಸದಸ್ಯರಾದ ನಾವು ವಿರೋಧಿಸುತ್ತೇವೆ ಎಂದು ಸಭೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದರು.
ಈವರೆಗೆ ಅಧ್ಯಕ್ಷರು ನಡೆಸಿರುವ ಕಳಪೆ ಕಾಮಗಾರಿ, ಕಮಿಷನ್ ದುರಾಸೆ, ಅಧಿಕಾರದ ಆಸೆಯಿಂದ ನಗರಸಭೆ ಅದೋಗತಿಗೆ ತಲುಪಿದೆ. ಈ ಸಂಬAಧ ಇಂದು ಜಿಲ್ಲೆಯ ಎಲ್ಲ ಶಾಸಕರು, ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನ್ಯಾಯ ಕೇಳಲು ಆಗಮಿಸಿz್ದೆÃವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕವಿತಾಶೇಖರ್, ಅರುಣ್‌ಕುಮಾರ್, ಮಧುಕುಮಾರ್ ರಾಜ್ ಅರಸ್, ಸುಜಾತಶಿವಕುಮಾರ್, ರೂಪಕುಮಾರ್, ಗೋಪಿ, ಅನುಮಧುಕರ್, ಮಣಿಕಂಠ, ವಿಫುಲ್‌ಕುಮಾರ್ ಜೈನ್, ರಾಜು, ಅಮೃತೇಶ್ ಚೆನ್ನಕೇಶವ, ದೀಪರವಿಕುಮಾರ್, ಭವ್ಯಮಂಜುನಾಥ್, ಲಲಿತ ರವಿನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net