ಬಳ್ಳಾರಿ ; ನಗರದ ಮುಂಡ್ರಗಿ ಪ್ರದೇಶದಲ್ಲಿರುವ ಗೆಲಾಕ್ಸಿ, ಲೋಹಿತ ರಸಾಯನಿಕ ಕೈಗಾರಿಕೆಗಳನ್ನು ಮುಚ್ಚುವಂತೆ ಆಗ್ರಹಿಸಿ ಇಲ್ಲಿನ ಹೊರವಲಯದ ಮುಂಡ್ರಗಿ ಪ್ರದೇಶದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಬಿಡಿಸಿಸಿ) ಸೋಮವಾರ ಪ್ರತಿಭಟನೆ ನಡೆಸಿತು.
ಬಿಡಿಸಿಸಿ ಸಂಸ್ಥೆ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಗೆಲಾಕ್ಸಿ ಮತ್ತು ಲೋಹಿತ ರಸಾಯನಿಕ ಕೈಗಾರಿಕೆಗಳಿಂದ ವಿಷಾನಿಲ ಹೊರ ಬಿಡುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಸಂಸ್ಥೆಗೆ ದೂರು ನೀಡಿದ್ದಾರೆ. ಇದರ ಬಗ್ಗೆ ಕೈಗಾರಿಕೆಗಳ ಮಾಲೀಕರ ಜತೆ ಹಲವು ಸಭೆ ನಡೆಸಿದರೂ ಯಾವುದೇ ಕ್ರಮವಹಿಸಿಲ್ಲ. ಅಲ್ಲದೆ, ಈ ಕೈಗಾರಿಕೆಗಳ ವಿಷಾನಿಲವು ಸುತ್ತಲಿನ ಕಾಟನ್‌ಮಿಲ್, ಕೋಲ್ಡ್ ಸ್ಟೋರೇಜ್, ರೈಸ್‌ಮಿಲ್ ಹಾಗೂ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಆಹಾರ ಪದಾರ್ಥಗಳ ಮೇಲೆ ಸೇರುತ್ತದೆ. ಇದರಿಂದ ವಾಂತಿ, ತಲೆ ಸುತ್ತು, ಶ್ವಾಸಕೋಶ, ಚರ್ಮ, ಹೃದಯ ಸಂಬಂಧಿತ ಕಾಯಿಲೆ ಹಾಗೂ ಜಾನವಾರಗಳ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ. ಆದ್ದರಿಂ, ಈ ಕೈಗಾರಿಕೆ ಕಂಪನಿಗಳನ್ನು ಕೂಡಲೇ ಬಂದ್ ಅಥವಾ ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಪ್ರತಿಭಟನೆ ಸ್ಥಳಕ್ಕೆ ಎಸಿ ಪಿ.ಪ್ರಮೋದ್ ಭೇಟಿ ನೀಡಿ ಗೆಲಾಕ್ಸಿ ಹಾಗೂ ಲೋಹಿತ ರಸಾಯನಿಕ ಕೈಗಾರಿಕೆ ಬಂದ್‌ಗೆ ಸಂಬಂಬಂಧಪಟ್ಟಂತೆ ಡಿಸಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದರು.