

ರಾಯಚೂರು ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಸದಾಶಿವ ರೆಡ್ಡಿಯವರ ಮೇಲೆ ಭೀಕರವಾಗಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಽಕಾರಿಗಳು ಜಿಲ್ಲಾಽಕಾರಿ ನಿತೀಶ್ ಕೆ. ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ದಾಳಿಗಳು ಜರುಗುತ್ತಿವೆ. ಕಾನೂನುಗಳನ್ನ ಮತ್ತು ಸಮಾಜವನ್ನ ರಕ್ಷಣೆ ಮಾಡುವ ವಕೀಲರ ಮೇಲೆ ನಡೆಯುತ್ತಿರುವ ದಾಳಿಗಳಿಂದ ನಾಗರಿಕ ಸಮಾಜದಲ್ಲಿ ಆತಂಕವು ಸೃಷ್ಟಿಯಾಗಿ ವಕೀಲರ ಪರಿಸ್ಥಿತಿ ಈಗಾದರೇ ಇನ್ನು ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ವಕೀಲರ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ತೀರಾ ಅಗತ್ಯವಾಗಿದೆ.
ಈ ಘಟನೆಯ ವಿರುದ್ಧ ರಾಜ್ಯದ ಎಲ್ಲಾ ವಕೀಲರ ಸಮೂಹ ಎಲ್ಲಾ ವಕೀಲರ ಸಂಘಗಳು, ನಾಗರಿಕ ಸಂಘಟನೆಗಳು ಹಾಗೂ ಮಾಧ್ಯಮಗಳು
ಒಗ್ಗಟ್ಟಾಗಿ ಕೈಜೋಡಿಸಬೇಕು ಹಾಗೂ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಆರೋಪಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು ಹಲ್ಲೆಕೋರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕು ಎಂದರು.
ರಾಜ್ಯದಲ್ಲಿ ವಕೀಲರ ರಕ್ಷಣೆ ಕಾಯಿದೆಯನ್ನು ರಾಜ್ಯ ಸರಕಾರ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಮತ್ತು ರಾಜ್ಯದ ಎಲ್ಲಾ ವಕೀಲ ಸಮುದಾಯಕ್ಕೆ ಅಗತ್ಯ ರಕ್ಷಣೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ನಜೀರ್ ಅಹ್ಮದ್ ಶೇರ್ ಅಲಿ, ಪ್ರಧಾನ ಕಾರ್ಯದರ್ಶಿ ಲಕ್ಷ÷್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಜ್ ಪಾಷ, ಹಿರಿಯ ವಕೀಲರಾದ ಎಚ್. ಜಗದೀಶ್, ಮುನ್ನಾ ಕುಮಾರ್, ಜಿ.ಎಸ್. ವೀರಭದ್ರಪ್ಪ, ಚಿತ್ರಗಾರ್ ರಾಜಕುಮಾರ್, ಶಿವಕುಮಾರ ಮ್ಯಾಗಳಮನಿ, ಸಂಗಪ್ಪ, ಗಿರೀಶ್ ಮಡಿವಾಳ್, ಓಂಕಾರ ಯಾದವ್ ಸೇರಿದಂತೆ ಅನೇಕರಿದ್ದರು.