ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

22 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೇಹಾ ಹಿರೇಮಠ ಹತ್ಯೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಧಾರವಾಡ ಅಂಜುಮನ್​ ಸಂಸ್ಥೆಯು ಸಮಾಜದ ವ್ಯಾಪಾರಸ್ಥರಿಗೆ ಸೋಮವಾರ ನೀಡಿದ್ದ ವ್ಯಾಪಾರ&ವಹಿವಾಟು ಬಂದ್​ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿದ ವ್ಯಾಪಾರಸ್ಥರು ಹಾಗೂ ಸಂಸ್ಥೆ ಪದಾಧಿಕಾರಿಗಳು ಅಂಜುಮನ್​ ಸಂಸ್ಥೆಯಿಂದ ಬೃಹತ್​ ಮೌನ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿವರೆಗೆ ಆಗಮಿಸಿ ಮನವಿಪತ್ರ ಸಲ್ಲಿಸಿದರು. ಮಧ್ಯಾಹ್ನವರೆಗೆ ವ್ಯಾಪಾರ ವಹಿವಾಟುಗಳಿಂದ ದೂರವಿದ್ದ ವ್ಯಾಪಾರಸ್ಥರು, ಅಂಗಡಿಗಳ ಬಾಗಿಲಿಗೆ ಜಸ್ಟೀಸ್​ ಾರ್​ ನೇಹಾ ಹಿರೇಮಠ ಎಂಬ ಪೋಸ್ಟರ್​ ಅಂಟಿಸುವ ಮೂಲಕ ಟನೆಯನ್ನು ತೀವ್ರವಾಗಿ ಖಂಡಿಸಿದರು.
ಸಮಾಜ ಹೆಣ್ಣು ಮಕ್ಕಳಿಗೆ ಸದಾ ಗೌರವ ನೀಡುತ್ತದೆ. ಕಾಲೇಜು ಆವರಣದಲ್ಲೇ ವಿದ್ಯಾಥಿರ್ನಿ ಕೊಲೆ ಮಾಡಿರುವುದು ಹೇಯ ಕೃತ್ಯವಾಗಿದೆ. ಆರೋಪಿ ಯಾಜ್​ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆಯ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಕೆ ಬಳಿಕ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್​ ತಮಟಗಾರ ಮಾತನಾಡಿ, ಮಹಿಳೆಯರನ್ನು ಗೌರವದಿಂದ ಕಾಣುವ ಸಮಾಜ ಅನ್ಯಾಯವನ್ನು ಎಂದಿಗೂ ಸಹಿಸುವವುದಿಲ್ಲ. ಕುಕೃತ್ಯಗಳಲ್ಲಿ ಭಾಗವಹಿಸುವ ಜನರ ಪರವಾಗಿ ಸಹ ಸಮಾಜ ನಿಲ್ಲುವುದಿಲ್ಲ. ಈ ಟನೆಯನ್ನು ತ್ವರಿತ ನ್ಯಾಯಾಲಯದ ಮೂಲಕ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದರು.
ಸಂಸ್ಥೆ ಪದಾಧಿಕಾರಿಗಳಾದ ಬಶೀರಅಹ್ಮದ ಜಾಗೀರದಾರ, ಪ್ರೊ. ಎಸ್​.ಎ. ಸರಗೀರೊ, ರಫೀಕ್​ ಅಹ್ಮದ್​ ಶಿರಹಟ್ಟಿ, ಮಹ್ಮದಶಫಿ ಕಳ್ಳಿಮನಿ, ಇರ್ಷಾದ ಬಿಸ್ತಿ, ಮಹಮ್ಮದಅಲಿ ಗೂಡುಬಾಯಿ, ರಿಯಾಜ್​ ಹಾವೇರಿಪೇಟ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net