ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

20 vikram 5
Published on

ನೇಹಾ ಹಿರೇಮಠ ಕೊಲೆ ಮಾಡಿದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು. ಇದರ ಜತೆಗೆ ಎಲ್ಲ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ನಗರದ ಸಕಲ ಸಮಾಜದ ಪ್ರಮುಖರು ಜಿಲ್ಲಾಡಳಿತಕ್ಕೆ ಶನಿವಾರ ಮನವಿಪತ್ರ ಸಲ್ಲಿಸಿದರು.
ಹಾಡು ಹಗಲೇ ಕಾಲೇಜು ಆವರಣದಲ್ಲಿ ವಿದ್ಯಾಥಿರ್ನಿ ಹತ್ಯೆ ನಡೆದಿರುವುದು ಖಂಡನೀಯ. ಇದರಿಂದ ಸಮಾಜದಲ್ಲಿ ಎಲ್ಲರಲ್ಲೂ ಭಯ ಹುಟ್ಟಿಸುವಂತಾಗಿದೆ. ಇದರೊಂದು ಲವ್​ ಜಿಹಾದ್​ ಪ್ರಕರಣವಾಗಿದ್ದು, ಹಿಂದು ಸಮಾಜದ ಸಜ್ಜನರು ಚಿಂತೆಗೀಡಾಗುವಂತಾಗಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಸುರಕ್ಷತೆ ಇಲ್ಲದಂತಾಗಿದೆ ಎಂದು ದೂರಿದರು.
ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರದ ಗ್ಯಾರಂಟಿ ಏನು? ಎಂಬ ಪ್ರಶ್ನೆ ಉದ್ಭವಿಸಿದೆ ಎಂದಿರುವ ಪ್ರತಿಭಟನಾಕಾರರು, ಇಂತಹ ಹೇಯ ಕೃತ್ಯ ನಡೆಯದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಎಸಗುವ ವ್ಯಕ್ತಿಗಳಿಗೆ ಖಡಕ್​ ಸಂದೇಶ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಡಾ. ಎಸ್​.ಆರ್​. ರಾಮನಗೌಡರ, ಶ್ರೀಧರ ನಾಡಗೀರ, ಡಾ. ಜ್ಯೋತಿಪ್ರಕಾಶ, ಪ್ರಭುಗೌಡ ಪಾಟೀಲ, ದತ್ತಾ ಡೋರ್ಲೆ, ಮಂಜುನಾಥ ಶಿಗ್ಗಾವಿ, ನಿತಿನ ರಾಮದುರ್ಗ, ಎಂ.ಜಿ. ಸಿಂದಗಿ, ದೀಪಕ ಆಕಳವಾಡಿ, ಲಕ್ಷ$್ಮಣ ಹೂಗಾರ, ರೋಹಿಣಿ ಕುಲಕಣಿರ್, ಏಕನಾಥ ಲಾತೂರಕರ, ಶ್ರೀಕಾಂತಾಚಾರ್ಯ ಬಿದರಕುಂದಿ, ಮಲ್ಲಿಕಾರ್ಜುನ ಬಾಳನಗೌಡ್ರ, ಎನ್​.ಬಿ. ಗೋಲಣ್ಣವರ, ಐ.ಎಸ್​. ಪರ್ವತಮಠ, ಅಮರನಾಥ ಟಿಕಾರೆ, ಮಹೇಶ ಕುಲಕಣಿರ್, ಗೀತಾ ಆಲೂರ, ಗಿರಿಶ ಮತ್ಸದ್ದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net