ಪಿಆರ್​ ಸಮೀಕ್ಷೆದಾರರಿಗೆ ಸೇವಾಭದ್ರತೆಗೆ ಆಗ್ರಹ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ರಾಜ್ಯದ ಪಿ.ಆರ್​. (ಖಾಸಗಿ ನಿವಾಸಿಗಳು) ಸಮೀೆದಾರರಿಗೆ ಸೇವಾ ಭದ್ರತೆ ಹಾಗೂ ಜೀವವಿಮೆ ಒದಗಿಸಿ ಇವರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂದ ವತಿಯಿಂದ ರಾಜ್ಯ ಸಹ ಕಾರ್ಯದರ್ಶಿ ಪಿಂಟು ಚವಾಣ ಅವರು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸರಿ ಸುಮಾರು 25 ರಿಂದ 30 ಸಾವಿರ ಪಿ.ಆರ್​.ಗಳಿಗೆ ಈಗಾಗಲೇ ಹೈಕೋರ್ಟ್​ ಆದೇಶದಂತೆ 10 ವರ್ಷ ದಿನಗೂಲಿ ಕೆಲಸಗಾರರಿಗೆ ಖಾಯಂ ಸೇವೆಗೊಳಿಸಲು ಅನುಮತಿ ನೀಡಿದೆ. ಹೀಗಾಗಿ ನಮಗೆ ದಿನಗೂಲಿ ಆಧಾರದ ಮೇಲೆ ದಿನಾಲೂ ಕೆಲಸ ನೀಡಬೇಕು ಹಾಗೂ ಜೀವ ವಿಮೆ ಒದಗಿಸಬೇಕು ಮತ್ತು ಎಲ್ಲ (ಪಿ.ಆರ್​) ಬೆಳೆ ಸಮಿೇದಾರಿಗೆ ರೇನ್​ ಕೋಟ್​, ಗುರುತಿನ ಚೀಟಿ ಮತ್ತು ಬೂಟ್​ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಬಗ್ಗೆ ರಾಜ್ಯದ ಎಲ್ಲ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಹಿಂದೆಯೂ ಮಾಹಿತಿ ತಿಳಿಸಿದರು ಸದ್ಯದವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಬಹುದಿನಗಳ ಬೇಡಿಕೆಯಾದ ಒಬ್ಬ ಪಿ.ಆರ್​.ಗೆ 10 ಲಕ್ಷ ಜೀವವಿಮೇ ಒದಗಿಸುವುದು, ಪ್ರತಿವರ್ಷ ರೈನ್​ಕೋಟ್​ ಮತ್ತು ಬೂಟ್​ ನೀಡುವುದು, ಸೇವೆ ಭದ್ರತೆ ಮಾಡಿ ಕನಿಷ್ಠ ವೇತನ ಮಾಡಿ ಮಂಜೂರಿಸುವುದು, ಸಮೀೆ ವೇಳೆ ಏನಾದರೂ ತೊಂದರೆ ಯಾದರೆ ಅದಕ್ಕೆ ಸರ್ಕಾರದಿಂದ ಚಿಕಿತ್ಸೆಯ ವೆಚ್ಚ ಭರಿಸಬೇಕು. ಒಂದು ಪ್ಲಾಟ್​ (ಸರ್ವೆ.ನಂ) ಗೆ 20 ರಿಂದ 30 ರೂಪಾಯಿ ಹಣ ಹೆಚ್ಚಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net