ರಸ್ತೆ ಮರು ಡಾಂಬರೀಕರಣಕ್ಕೆ ಆಗ್ರಹ

30ARATAL1.jpg
Published on

ಅರಟಾಳ: ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕಿಸುವ ಮೂರು ಕಿ.ಮೀ. ರಸ್ತೆ ತಿಂಗಳು ಕಳೆಯುವುದರೊಳಗಾಗಿ ಕಳಪೆ ಕಾಮಗಾರಿಯಿಂದಾಗಿ ಡಾಂಬರ ಕಿತ್ತು ಬರುತ್ತಿದ್ದು ಮರು ಡಾಂಬರೀಕರಣ ಮಾಡದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಭಾನುವಾರ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.  

ಅರಟಾಳ ಕ್ರಾಸ್‌ನಿಂದ ಗ್ರಾಮದವರೆಗಿನ ರಸ್ತೆಯ ಡಾಂಬರ ಕಿತ್ತು ಬರುತ್ತಿರುವುದನ್ನು ತೋರಿಸುತ್ತಿರುವ ಗ್ರಾಮಸ್ಥರು. ರಾಮಪ್ಪ ಪೂಜಾರಿ, ಗಂಗವ್ವ ಅರ್ಜುಣಗಿ, ಅಣ್ಣಪ್ಪ ಕಾಂಬಳೆ, ಅಶೋಕ ಪೂಜಾರಿ ಇತರರಿದ್ದರು.
ಅರಟಾಳ ಕ್ರಾಸ್‌ನಿಂದ ಗ್ರಾಮದವರೆಗಿನ ರಸ್ತೆಯ ಡಾಂಬರ ಕಿತ್ತು ಬರುತ್ತಿರುವುದನ್ನು ತೋರಿಸುತ್ತಿರುವ ಗ್ರಾಮಸ್ಥರು. ರಾಮಪ್ಪ ಪೂಜಾರಿ, ಗಂಗವ್ವ ಅರ್ಜುಣಗಿ, ಅಣ್ಣಪ್ಪ ಕಾಂಬಳೆ, ಅಶೋಕ ಪೂಜಾರಿ ಇತರರಿದ್ದರು.

ಪ್ರತಿಭಟನಾಕಾರರು ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಗುಣಮಟ್ಟವಿಲ್ಲದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಪರಿಣಾಮವಾಗಿ ಡಾಂಬರ ಕಿತ್ತು ಕೈಗೆ ಬರುತ್ತಿದೆ. ಅರಟಾಳ ಕ್ರಾಸ್‌ನಿಂದ ಅರಟಾಳ ಗ್ರಾಮದವರೆಗೆ ಗುತ್ತಿಗೆದಾರ ತರಾತುರಿಯಿಂದ ರಸ್ತೆ ಕಾಮಗಾರಿ ಮಾಡಿ ಕೈ
ತೊಳೆದುಕೊಂಡಿದ್ದಾರೆ ಈ ಸಂಗತಿ ಅಕಾರಿಗಳ ಗಮನಕ್ಕೆ ತಂದಾಗಲೂ ಕಾಮಗಾರಿ ಕಳಪೆಯಾಗದಂತೆ ತಡೆಗಟ್ಟಲಿಲ್ಲ. ಈಗಲಾದರೂ ಅಕಾರಿಗಳು ಹಾಗೂ ಜನಪ್ರತಿನಿಗಳು ಕಾಮಗಾರಿ ಪರಿಶೀಲಿಸಿ ಮರು ಡಾಂಬರೀಕರಣ ಮಾಡದಿದ್ದರೆ ಗ್ರಾಮಸ್ಥರು ಹೋರಾಟ
ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಪಂ ಸದಸ್ಯರಾದ ರಾಮಪ್ಪ ಪೂಜಾರಿ, ಗಂಗವ್ವ ಅರ್ಜುಣಗಿ, ಯುವಕರಾದ ಅಣ್ಣಪ್ಪ ಕಾಂಬಳೆ, ಅಶೋಕ ಪೂಜಾರಿ, ಬಾಲಪ್ಪಗೌಡ ಜಂಬಗಿ, ಕುಮಾರ ಕಾಂಬಳೆ, ಮಾಳಪ್ಪ ಪೂಜಾರಿ, ಹಣಮಂತ ಗಿರಗಾಂವಿ, ಅಣ್ಣಪ್ಪ ನಾವಿ ಇತರರಿದ್ದರು.

ಕಾಮಗಾರಿ ಕಳಪೆಯಾದ ಬಗ್ಗೆ ಮಾಹಿತಿಯಿಲ್ಲ. ನಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಗುತ್ತಿಗೆದಾರರನ್ನು ಕರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಪ್ರದೀಪ ಪಾಟೀಲ  ಎಇಇ ಎಚ್‌ಬಿಸಿ ನೀರಾವರಿ ಇಲಾಖೆ ಅಥಣಿ

ಪ್ರದೀಪ ಪಾಟೀಲ  ಎಇಇ ಎಚ್‌ಬಿಸಿ ನೀರಾವರಿ ಇಲಾಖೆ ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net