ರಸ್ತೆ ಸೌಲಭ್ಯ ಒದಗಿಸಲು ಆಗ್ರಹ, ಸೇವಾಲಾಲ ನಗರ ನಿವಾಸಿಗಳ ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ

TANDA PEOPLES PROTEST
ವಿಜಯಪುರ ಜಿಲ್ಲಾಡಳಿತಕ್ಕೆ ವಾರ್ಡ್ ನಂ. 4ರ ಸೇವಾಲಾಲ ನಗರ ನಿವಾಸಿಗಳು ಮನವಿ ಸಲ್ಲಿಸಿದರು. ಮುಖಂಡರಾದ ಪರಮೇಶ್ವರ ಶ್ಯಾಮು ಚವಾಣ್, ಗೋಪಾಲ್ ಮಹಾರಾಜ್ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ವಾರ್ಡ್ ನಂ. 4ರ ಸೇವಾಲಾಲ ನಗರ (ತಾಂಡಕ್ಕೆ) ರಸ್ತೆ ಸೌಲಭ್ಯ ಒದಗಿಸಲು ಆಗ್ರಹಿಸಿ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಸ.ನಂ 136 ರಲ್ಲಿರುವ ತಾಂಡಾದಿಂದ ಮುಖ್ಯ ರಸ್ತೆಗೆ ಬರಲು ರಸ್ತೆ ಸೌಲಭ್ಯವಿಲ್ಲ. ಸುಮಾರು 60 ವರ್ಷದಿಂದ ತಾಂಡಾದಲ್ಲಿ ಬಂಜಾರಾ ಸಮಾಜದ ಜನ ವಾಸವಾಗಿದ್ದಾರೆ. ತಾಂಡಾದ ರಸ್ತೆಗಾಗಿ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾಂಡಾದಲ್ಲಿ ಸುಮಾರು 2400 ಜನರು ವಾಸವಿದ್ದು 2000 ಮತದಾರರು ಇದ್ದಾರೆ. 400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದು ಬಸ್ ಸೌಕರ್ಯವಿಲ್ಲದೇ ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ರಸ್ತೆ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಪರಮೇಶ್ವರ ಶ್ಯಾಮು ಚವಾಣ್, ಗೋಪಾಲ್ ಮಹಾರಾಜ್, ಸಂಜು ಮಹಾರಾಜ್, ದನಸಿಂಗ್ ಮಹಾರಾಜ್, ರವಿ ರಾಥೋಡ, ಪರಮೇಶ್ವರ ನಾಯ್ಕ, ರಾಜು ಖಂಡಸಾಲಿ, ಚಂದ್ರಶೇಖ ರಾಠೋಡ, ರಮೇಶ ನಾಯ್ಕ, ಹೀರು ರಾಠೋಡ, ರವಿ ಲಮಾಣಿ, ಮಹಾದೇವ ರಾಠೋಡ, ತಾನಾಜಿ ಕಾರಬಾರಿ, ಮಹೇಶ ಮಾನೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net