

ತರೀಕೆರೆ: ದಲಿತರ ಭೂಮಿ ಮತ್ತು ವಸತಿ ಹಕ್ಕಿನ ಜತೆಗೆ ವಿವಿಧ ಸಮಸ್ಯೆ ಬಗೆಹರಿಸಬೇಕು ಎಂದುಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಪದಾಧಿಕಾರಿಗಳುಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಶ್ವಜೀತ ಮೆಹತಾಗೆಮನವಿ ಸಲ್ಲಿಸಿದರು.
ತಾಲೂಕು ಕಚೇರಿಯಲ್ಲಿ ನಮೂನೆ 50, 53, 57ರಡಿ ಅರ್ಜಿ ಸಲ್ಲಿಸಿ ಸರ್ಕಾರಿ ಜಮೀನು
ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡದೇ ನಿರ್ಲಕ್ಷ ವಹಿಸಲಾಗುತ್ತಿದೆ.
ತಾಲೂಕು ಕಚೇರಿಯ ಅಭಿಲೇಖಾಲಯದಿಂದ ಪಿಟಿಸಿಎಲ್ ಕೇಸ್‌ಗೆ ಸಂಬಂಧಿಸಿದ ಭೂ
ದಾಖಲೆಗಳು ನಾಪತ್ತೆಯಾಗುತ್ತಿದೆ ಎಂದು ದೂರಿದರು.
ತಾಲೂಕಿನ ಬಿ.ರಾಮನಹಳ್ಳಿ ಗ್ರಾಮಠಾಣಾ ಮತ್ತು ಎಂ.ಸಿ.ಹಳ್ಳಿ ಗ್ರಾಮದ ಮಲ್ಲಯ್ಯನಕೆರೆ
ಒತ್ತುವರಿಯಾಗಿದ್ದು, ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಒತ್ತುವರಿ ತೆರವಿಗೆ
ಪ್ರಯತ್ನಿಸದ ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಪಿಟಿಸಿಎಲ್ ಪ್ರಕರಣಕ್ಕೆ ಸಂಬಂಧಿಸಿದಭೂ ದಾಖಲೆ ನಾಪತ್ತೆಯಾಗಲು ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದುಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ತಾಲೂಕು ಸಂಚಾಲಕ ರಾಜಪ್ಪ, ಜಿಲ್ಲಾಸಂಘಟನಾ ಸಂಚಾಲಕ ಜೆ.ರಾಮಚಂದ್ರ, ಪ್ರಮುಖರಾದ ಅಣ್ಣಯ್ಯ, ಶಿವಕುಮಾರ್, ವಿಜಯ್,ಡಿ.ಎನ್.ಸುನೀಲ್, ಹನುಮಂತು ಮತ್ತಿತರರಿದ್ದರು.