ಜಿಲ್ಲೆಯಲ್ಲಿ ಮೀಸಲು ಕ್ಷೇತ್ರಕ್ಕೆ ಬೇಡಿಕೆ, ದಸಂಸ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಹೇಳಿಕೆ

28mnd Kadroli
Published on

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರದಲ್ಲಿ ಒಂದು ಮೀಸಲು ಕ್ಷೇತ್ರ ಆಗಬೇಕೆಂಬುದು ಬಹು ದಿನದ ಬೇಡಿಕೆಯಾಗಿದೆ. ಮುಂದಿನ ದಿನದಲ್ಲಿ 224 ಕ್ಷೇತ್ರಗಳ ಮರು ವಿಂಗಡನೆಯಾಗುತ್ತದೆ. ಈ ವೇಳೆ 10ರಿಂದ 15 ಮೀಸಲು ಕ್ಷೇತ್ರವಾಗುತ್ತವೆ. ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗುತ್ತದೆ.ಆಗ ಯಾರೇ ಅಭ್ಯರ್ಥಿಗಳಾದರೂ ಸಮಾಜಕ್ಕಾಗಿ ಕೆಲಸ ಮಾಡೋಣ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘದ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳಿ ಹೇಳಿದರು.


ಪಟ್ಟಣ ಪಂಚಾಯಿತಿಯ ಟೌನ್ ಹಾಲ್​ನಲ್ಲಿ ಭಾನುವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘದ (ಚಂದ್ರಕಾಂತ ಕಾದ್ರೋಳಿ) ಬಣದ ನೂತನ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ ಹಾಗೂ ಬೆಳಗಾವಿ ವಿಭಾಗದ ಅಧ್ಯಕ್ಷ ಎಸ್. ಕಾದ್ರೋಳಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉತ್ತರ ಕನ್ನಡ ಜಿಲ್ಲೆಯಿಂದ ನನ್ನನ್ನು ಗಡಿಪಾರು ಮಾಡಿದ್ದಾರೆ ಎಂದು ಕೆಲವರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರು ನಮ್ಮ ಮುಂದೆ ಚರ್ಚೆಗೆ ಬರಲಿ. ಈಗಾಗಲೇ ನನ್ನ ಮೇಲೆ ಇದ್ದ ಪ್ರಕರಣದಿಂದ ಮುಕ್ತನಾಗಿದ್ದೇನೆ ಎಂದರು.


ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಸಂವಿಧಾನದ ಉಪಯೋಗ ತೆಗೆದುಕೊಳ್ಳಲು ಸಂಘಟನೆಯಿಂದ ಮಾತ್ರ ಸಾಧ್ಯ. ಬಸವರಾಜ ಅವರು ವಹಿಸಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸುವ ಚತುರರಾಗಿದ್ದಾರೆ ಎಂದರು.


ನೂತನ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ಅಶೋಕ ಚಲವಾದಿ, ಎಲ್.ಟಿ. ಪಾಟೀಲ, ರಾಘವೇಂದ್ರ ಮಳಗಿಕರ, ಆರ್.ಜಿ. ಬೆಳ್ಳನವರ, ಸಹದೇವಪ್ಪ ನಡಗೇರ, ಸಿದ್ದು ಹಡಪದ, ವಸಂತ ಕೋಣಸಾಲಿ, ಬಸವರಾಜ ನಡುವಿನಮನಿ, ನಾಗರಾಜ ಬೆಣ್ಣಿ ಮಾತನಾಡಿದರು.
ಸುರೇಶ ಹರಿಜನ, ಸಿ. ವಸಂತ ಕುಮಾರಿ, ಚಿದಾನಂದ ಹರಿಜನ ಎಚ್. ನಾಯ್ಕ, ಕೃಷ್ಣ ಹಿರೇಹಳ್ಳಿ ಸೇರಿ ಸಂಘಟನೆಯ ರಾಜ್ಯ ಹಾಗೂ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net