

ವಿಜಯಪುರ: ಸದ್ಯದ ದಿನಗಳಲ್ಲಿ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರೆಲ್ಲರೂ ಮೀಸಲಾತಿ ಕೇಳುವಂತಾಗಿದೆ. ಅಗರ್ಭ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಸಂಪತ್ತು ಕೆಲವೇ ಕೆಲವರ ಬಳಿ ಕೇಂದ್ರಿಕೃತವಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯ, ಆಳಂದ ಶಾಸಕ ಬಿ.ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವ ಹಾಗೂ ಜಾಗೃತ ಕರ್ನಾಟಕ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ "ಅಂಬೇಡ್ಕರ್ ಹಬ್ಬ' ಆಚರಣೆಯ ಮೂರನೇ ದಿನವಾದ ಭಾನುವಾರ ರಾಜಕೀಯ ಬದಲಾವಣೆ ಸಾಧ್ಯತೆ ಕುರಿತು ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ "ಅರಿವೇ ಅಂಬೇಡ್ಕರ್' ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಆಶಯ ಈಡೇರಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹಲವು ವೈರುದ್ಯಗಳು ಟಿಸುತ್ತಿವೆ. ಶ್ರೀರಾಮ ಆದರ್ಶಗಳ ಪ್ರತಿಕ, ಸೌಮ್ಯ ಸ್ವರೂಪಿ. ಆದರೆ ಬಿಲ್ಲು&ಬಾಣ ಹಿಡಿದ ಶ್ರೀರಾಮನ ಭಾವಚಿತ್ರವೇ ಇಂದು ವಿಜೃಂಭಿಸುತ್ತಿದೆ. ರಾಮ ಭಕ್ತ ಹನುಮ ಇಂದು ಗದೆ ಎತ್ತಿ ಹಿಡಿದು ಹೊಡೆಯಲು ಸಿದ್ಧನಾಗಿದ್ದಾನೆ. ಇಂದು ವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಬಾಯಿಗೆ ಬೀಗ ಹಾಕಲಾಗಿದೆ. ಬದಲಾವಣೆ ಬಯಸಿದವರೆಲ್ಲರೂ ಒಂದಾಗಬೇಕಿದ್ದು, ಗಾಂಧಿ, ಅಂಬೇಡ್ಕರ್ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಕೆಲವರಿಗೆ ಡಾ. ಅಂಬೇಡ್ಕರ್ ಬೇಡವಾದರೂ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಕೋಮುವಾದ ಕಾನೂನಿನಿಂದ ಹೋಗಲಾಡಿಸಲು ಸಾಧ್ಯವಿಲ್ಲ. ವಿಚಾರ, ಚಿಂತನೆಯಿಂದ ಪರಿವರ್ತಿಸಬಹುದಾಗಿದೆ. ವಿದ್ಯಾರ್ಥಿ ಸಮುದಾಯ ಸಹ ಇಂದಿನ ಭ್ರಷ್ಟ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಸಲಹೆ ನೀಡಿದರು.
ಸ್ವಾತಂತ್ರ ಹೋರಾಟದಲ್ಲಿ ಜಮೀನ್ದಾರರು, ರಾಜ ಮಹಾರಾಜರು ಪಾಲ್ಗೊಂಡರು. ಅವರೇ ಮುಂದೆ ಕಾಂಗ್ರೆಸ್ಗೆ ಬಂದು ಆಡಳಿತದ ಚುಕ್ಕಾಣಿ ಹಿಡಿದರು.
ಅದರಿಂದ ಅಂಬೇಡ್ಕರ್ಗೆ ಬೇಸರವಾಗಿ ಬೇರೆ ಪ ಕಟ್ಟಿದರು. ಬಾಬಾ ಸಾಹೇಬರು ಹಿಂದು ಧರ್ಮ ತೊರೆದರು. ಮನುಸ್ಮತಿ ಸುಟ್ಟು ಹಾಕಿದರು. ಆದರೆ, ಅದೇ ಬಲಪಂಥೀಯರು ಇಂದು ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಫೋಟೊ ಹಿಡಿದುಕೊಳ್ಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಬಿ.ಆರ್. ಪಾಟೀಲ ಪ್ರಶ್ನಿಸಿದರು.
ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವಿ ಬಿರಾದಾರ, ಡಾ. ಭುವನೇಶ್ವರಿ ಕಾಂಬಳೆ, ಡಾ. ಸುರೇಖಾ ರಾಠೋಡ, ಟಿಯೋಲಾ ಮಚಾದೋ, ಬಿ.ಸಿ, ಬಸವರಾಜ್, ಅಕ್ಷತಾ ಕೆ.ಸಿ., ಸೀತಾಲಕ್ಷಿ$್ಮ ಮತ್ತಿತರರಿದ್ದರು.
ಬೈಗುಳದ ಪದವಾದ ರಾಜಕಾರಣ : ವಾಸು ಚಿಂತಕ ಡಾ. ಎಚ್.ವಿ. ವಾಸು ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧಿ ಅವರು ಶುದ್ಧ, ಪವಿತ್ರವಾದ ರಾಜಕಾರಣ ಮಾಡಿದರು. ಯಾರ ಕೈಯಿಂದ ಯಾರಿಗೆ ಅಧಿಕಾರ ಹೋಗಬೇಕು ಎಂಬುದನ್ನು ರಾಜಕೀಯ ಚಳವಳಿ ಮೂಲಕ ಪ್ರತಿಪಾದಿಸಿದರು. ಅಂತಹ ರಾಜಕಾರಣವನ್ನು ಇಂದಿನ ಪ್ರಾವಂತ ಯುವ ಜನರು ಮಾಡಬೇಕು. ಆದರೆ, ಸದ್ಯ ರಾಜಕಾರಣ ಎಂಬುದು ಕೆಟ್ಟದಕ್ಕೆ ಬಳಕೆಯಾಗುತ್ತಿದ್ದು, ಬೈಗುಳುದ ಪದವಾಗಿ ಪರಿವರ್ತನೆ ಆಗಿದೆ ಎಂದು ಬೇಸರಿಸಿದರು.
ಇಂದು ರಾಜಕಾರಣ ಇಂದು ಬಿಜಿನೆಸ್ ಆಗಿ ಮಾರ್ಪಟ್ಟಿದೆ. ಬಂಡವಾಳ ಹೂಡುತ್ತಾರೆ, ಬಂಡವಾಳ ತೆಗೆಯುತ್ತಾರೆ. ರಾಜಕಾರಣದ ಸಾಮ್ರಾಜ್ಯ, ಕೋಟೆ ತಮ್ಮ ಉತ್ತರಾಧಿಕಾರಿಗೆ ಬಿಟ್ಟುಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದರು. ಮೊಬೈಲ್ ಜನರನ್ನು ಖಿನ್ನತೆಗೆ ಕರೆದೊಯ್ಯುತ್ತಿದೆ. ತಮ್ಮ ರೀಲ್ಸ್, ಪೋಸ್ಟ್ ಜನ ನೋಡುತ್ತಿಲ್ಲ ಎಂಬ ಖಿನ್ನತೆಯೂ ಈಗ ಅಧಿಕವಾಗಿದೆ, ಇನ್ನೊಂದೆಡೆ ಮೂರನೇ ಎರಡರಷ್ಟು ಕೆಲಸ ಮಾಡುವ ಮಹಿಳೆಯರಿಗೆ ಶೇ. 10ರಷ್ಟು ಅಧಿಕಾರ, ಆಸ್ತಿ ಇಲ್ಲ. ಪುರುಷರ ಕೈಯಲ್ಲಿ ಅಧಿಕಾರ, ಆಸ್ತಿ ಇದೆ ಎಂದರು. ಐಎಎಸ್, ಕೆಎಎಸ್, ರೈತ, ಉಪನ್ಯಾಸಕ ಏನೇ ಆಗುವ ಕನಸಿದ್ದರೂ ಅದರ ಜತೆಗೆ ಉತ್ತಮ ರಾಜಕಾರಣ ಮಾಡುವ ಗುರಿ ಯುವಕರು ಬೆಳೆಸಿಕೊಳ್ಳಬೇಕು ಎಂದರು. ಪವನ್ನು ಪ್ರವೇಶಿಸಿಯಾದರೂ ಸೈ, ಹೊಸ ಪ ಕಟ್ಟಿಯಾದರೂ ಸೈ ಒಟ್ಟಿನಲ್ಲಿ ಹದಗೆಟ್ಟಿರುವ ರಾಜಕೀಯ ಬದಲಿಸೋಣ, ಅದೇ ರೀತಿ ಇಲ್ಲಿನ ರಾಜಕಾರಣ ಭಾಷೆ ಕೆಡಿಸಿದ ಸ್ಥಳಿಯ ಶಾಸಕರನ್ನು ಬದಲಿಸುವ ರಾಜಕೀಯ ಮಾಡಬೇಕಿದೆ ಎಂದರು.