ಪುತ್ತಿಗೆ, ಪಾಲಡ್ಕ ರಸ್ತೆ ದುರಸ್ತಿಗೆ ಆಗ್ರಹ : ಗುಡ್ಡೆಯಂಗಡಿಯಿಂದ ವಾವಿನಕಟ್ಟೆವರೆಗೆ ಪ್ರತಿಭಟನಾ ಜಾಥಾ

Mbd_Road Protest
Published on

ಮೂಡುಬಿದಿರೆ: ಬೆಳ್ಮಣ್ ಮತ್ತು ಮೂಡುಬಿದಿರೆ ಸಂಪರ್ಕ ರಸ್ತೆಯ ಪುತ್ತಿಗೆ ಪಾಲಡ್ಕ ರಸ್ತೆಯು ಭಾಗಶಃ ಹದಗೆಟ್ಟಿದ್ದು, ದುರಸ್ತಿ ವಾಡಲು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗುಡ್ಡೆಯಂಗಡಿ ಬಸ್ ನಿಲ್ದಾಣದಿಂದ ಪಾಲಡ್ಕ ವಾವಿನಕಟ್ಟೆಯವರೆಗೆ ಗ್ರಾಮಸ್ಥರಿಂದ ಭಾನುವಾರ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.

ರಸ್ತೆಯಲ್ಲಿರುವ ಹೊಂಡಗಳಲ್ಲಿ ಬಾಳೆ ಗಿಡಗಳನ್ನು ಪ್ರತಿಭಟನಾಕಾರರು ನೆಟ್ಟರು.

ಪ್ರತಿಭಟನೆಯ ಪ್ರಮುಖ ಪ್ರಶಾಂತ್ ಭಂಡಾರಿ, ಈ ರಸ್ತೆಯು ಜನನಿಬಿಡ, ವಾಹನ ದಟ್ಟಣೆ ಇರುವ ರಸ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ರಸ್ತೆ ದುರಸ್ತಿ ವಾಡುವಂತೆ ಹಲವಾರು ಬಾರಿ ಒತ್ತಾಯಿಸಿದ್ದೇವೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪುತ್ತಿಗೆ, ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಒಗ್ಗಟ್ಟಾಗಿ ಪ್ರತಿಭಟನೆ ವಾಡಿದ್ದು, ಸಂಬಂಧಪಟ್ಟರು ಶ್ರೀ ಸ್ಪಂದಿಸುವಂತೆ ಆಗ್ರಹಿಸುತ್ತೇವೆ ಎಂದರು.

ಹೋರಾಟದ ಪ್ರಮುಖರಾದ ಅಶೋಕ್ ಹೆಗ್ಡೆ, ನಿವೃತ್ತ ಶಿಕ್ಷಕ ಅಂಡ್ರೋ ಡಿಸೋಜ, ಪುತ್ತಿಗೆ ಗ್ರಾ.ಪಂ. ವಾಜಿ ಅಧ್ಯಕ್ಷ ಶಶಿಧರ್ ಪಿ., ರೋಶನ್ ಸೆರವೊ ಗುಡ್ಡೆಯಂಗಡಿ ಪುತ್ತಿಗೆ ಹಾಗೂ ಪಾಲಡ್ಕ ಗ್ರಾ.ಪಂ. ಸ್ಥಳೀಯ ಜನಪ್ರತಿನಿಧಿಗಳು, 300ಕ್ಕೂ ಅಧಿಕ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net