ಗಣೇಶ ಮೂರ್ತಿ ವಿಸರ್ಜನೆ ಬಾವಿ ನವೀಕರಣಕ್ಕೆ ಆಗ್ರಹ

h12-ganesh bhavi
Published on

ಹುಬ್ಬಳ್ಳಿ: ನಗರದಲ್ಲಿರುವ ವಿವಿಧ ಗಣೇಶ ಮೂರ್ತಿ ವಿಸರ್ಜನಾ ಬಾವಿಗಳಿಗೆ ಮಂಗಳವಾರ ಭೇಟಿ ನೀಡಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು, ನವೀಕರಣ ಮಾಡಿಸುವಂತೆ ಮಹಾನಗರ ಪಾಲಿಕೆಗೆ ಆಗ್ರಹಿಸಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣೇಶ ವಿಗ್ರಹಗಳು, ಮಠ, ಮಂದಿರ, ಮನೆ, ಮನೆಯಲ್ಲಿ ಸ್ಥಾಪಿಸಿರುವ ಶ್ರೀ ಗಣೇಶ ವಿಗ್ರಹಗಳನ್ನು ಇಂದಿರಾಗಾಜಿನ ಮನೆ ಆವರಣದಲ್ಲಿರುವ (ವಲಯ ಕಚೇರಿ 9), ಹೊಸೂರಿನಲ್ಲಿರುವ (ಕೆನರಾ ಹೋಟೆಲ್ ಎದುರು) ಶ್ರೀ ಗಣೇಶ ಮೂರ್ತಿ ವಿಸರ್ಜನಾ ಬಾವಿಗಳನ್ನು ಪದಾಧಿಕಾರಿಗಳು ಪರಿಶೀಲಿಸಿದರು.

ಗಣೇಶ ಮೂರ್ತಿ ವಿಸರ್ಜನೆಗೆ ಅನುಕೂಲವಾಗುವಂತೆ ಬಾವಿಗಳಿಗೆ ನೀರು ತುಂಬುವುದು, ವಿದ್ಯುತ್ ದ್ವೀಪ ಅಳವಡಿಕೆ, ದೊಡ್ಡ ಗಣೇಶ ವಿಗ್ರಹ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ, ಈಜುಗಾರರ ನೇಮಕ ಮಾಡಬೇಕು. ಬಾವಿ ಸ್ವಚ್ಛತೆ, ಗಣೇಶ ವಿಗ್ರಹ ಬರುವ ಮತ್ತು ಹೋಗುವ ರಸ್ತೆ ಸುಧಾರಿಸುವುದು, ಕಿತ್ತೂರ ಚನ್ನಮ್ಮ ವೃತ್ತದಲ್ಲಿನ ಮೇಲ್ಸೇತುವೆ ಕಾಮಗಾರಿ ನಿಲ್ಲಿಸಿ ರಸ್ತೆ ದುರಸ್ತಿ ಮಾಡುವುದು, ಮೆರವಣಿಗೆ ವೇಳೆ ರಸ್ತೆ ಆಜು ಬಾಜು ಇರುವ ಗಿಡದ ಟೊಂಗಿ ಕತ್ತರಿಸುವುದು, ಬಾವಿ ಹತ್ತಿರ ಗಣೇಶ ವಿಸರ್ಜನೆ ನೋಡಲು ಜನರಿಗೆ ಆಸನಗಳ ವ್ಯವಸ್ಥೆ, ವಿಸರ್ಜನೆ ಮಾಡುವಂತಹ ವೇದಿಕೆ ನವೀಕರಣಗೊಳಿಸುವುದು, ಸಣ್ಣ ಗಣಪತಿ ವಿಗ್ರಹಗಳ ವಿಸರ್ಜನೆಗೆ ಕನ್ವೆನೆಯರ್ ನಿರ್ಮಿಸಲು ಮಹಾ ಮಂಡಳದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದರು.

ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ, ಪ್ರಮುಖರಾದ ಸಂಗೀತಾ ಇಜಾರದ, ಅಲ್ತಾಫ ಕಿತ್ತೂರ, ಎಂ.ಎಂ. ಡಂಬಳ, ಎಸ್.ಎಂ. ಅಂಗಡಿ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿ ಶೆಟ್ಟರ್, ಅನಿಲ ಕವಿಶೆಟ್ಟಿ, ರೋಹನ ಗೊಂದಕರ, ಅರುಣ ಹಚಡದ, ಆರ್.ಎಫ್. ಕರಕಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net