

ಹುನಗುಂದ: ತಾಲೂಕಿನ ಖಜಗಲ್ಲ ಮತ್ತು ಕೆಂಗಲ್ ಗ್ರಾಮದ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿದ್ದು, ಬೀಳುವ ಹಂತದಲ್ಲಿರುವ ತಂಗುದಾಣವನ್ನು ಜೀಣೋದ್ಧಾರ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ರೋಹಿತ್ ಬಾರಕೇರ ಮಾತನಾಡಿ, ಖಜಗಲ್ಲ ಮತ್ತು ಕೆಂಗಲ್ ಗ್ರಾಮದ ಬಸ್ ನಿಲ್ದಾಣ 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಪ್ರಸ್ತುತ ಸಂಪೂರ್ಣ ಶಿಥಿಲಗೊಂಡಿದ್ದು, ಗ್ರಾಮದ ಜನರಿಗೆ ತೊಂದರೆಯಾಗುತ್ತಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣ ಜೀರ್ಣೋದ್ಧಾರಗೊಳಿಸಬೇಕೆಂದು ಒತ್ತಾಯಿಸಿದರು.
ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರವೀಣ ವಾಲೀಕಾರ, ಮುಖಂಡರಾದ ಸಂಜಯ ಗೌಡರ, ಮಂಜು ವಡ್ಡರ್, ಸಹೋಲ್ ಸುತಾರ, ರವಿ ಕೊಪ್ಪದ, ಸಂಗಮೇಶ ಗೌತಗಿ, ದಶರಥ ವಡ್ಡರ, ಶ್ರವಣ ಹಿರೇಮಠ, ಕಿರಣ ವಡ್ಡರ, ಸದ್ದಾಂ ಕಲಾಲ, ರವಿ ಭಜಂತ್ರಿ ಇದ್ದರು.