

ರಾಯಚೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದರೂ ಅನಽಕೃತ ತರಕಾರಿ ಮಾರುಕಟ್ಟೆ ಸ್ಥಳಾಂತರವಾಗದೇ ಇರುದವರಿಂದ ಪಾಲಿಕೆಗೆ ಒಂದು ಕೋಟಿ ರೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಮಾವಿನಕೆರೆ ಸ್ಮಶಾನ ಸ್ಥಳದಲ್ಲಿ ನಡೆಸುತ್ತಿರುವ ತರಕಾರಿ ಮಾರುಕಟ್ಟೆ ಟೆಂಡರ್ ಆಗಿಲ್ಲ. ಅನಽಕೃತವಾಗಿ ರವೀಂದ್ರ ಜಲ್ದಾರ ಹಾಗೂ ಬಾಬರ್,ಎಸ್.ರಾಜು,ಶಿವುಕುಮಾರ ಯಾದವ ಸೇರಿಕೆಲವರು ಅನಽಕೃತ ಕರವಸೂಲಿ ಮಾಡಿಕೊಂಡು ಪಾಲಿಕೆ
ಪಾವತಿಸದೇ ವಂಚಿಸುತ್ತಿದ್ದಾರೆAದು ಆರೋಪಿಸಿದರು.
ಉಪ ಆಯುಕ್ತ ಗುರುಸಿದ್ದಯ್ಯ ಹೀರೆಮಠ ಇವರ ಬೆಂಬಲದೊAದಿಗೆ ಅನಽಕೃತ ಕರವಸೂಲಿ ನಡೆಯುತ್ತಿದೆ. ಪಾಲಿಕೆ ಆದಾಯಕ್ಕೆ ಖೋತಾ ಆದರೂ ಪಾಲಿಕೆಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನವರಿ ೮ ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇvರ ಸದಸ್ಯರುಗಳು ಸರ್ವಾನುಮತದಿಂದ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ಣಯಿಸಿದ್ದಾರೆ. ಎರಡು ತಿಂಗಳಾದರೂ ತರಕಾರಿ ಮಾರುಕಟ್ಟೆ ಸ್ಥಳಾಂತರವಾಗಿಲ್ಲ. ಕೂಡಲೇ ಪಾಲಿಕೆ ಆಯುಕ್ತರು ಅಕ್ರಮವಾಗಿ ಕರವಸೂಲಿ ಮಾಡುವವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಪಾಲಿಕೆಗೆ ಆಗಿರುವ ಆರ್ಥಿಕ ನಷ್ಟವನ್ನು ವಸೂಲಿ ಮಾಡಬೇಕೆಮದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಭು ನಾಯಕ, ಕೆ.ವಿ.ಖಾಜಪ್ಪ, ಬಸವರಾಜ, ಉದಯಕುಮಾರ ಇದ್ದರು.