ನರೇಗಾ ಕೂಲಿ ಹಣ ಬಿಡುಗಡೆಗೆ ಆಗ್ರಹ; ಎಐಕೆಕೆಎಂಎಸ್ ನೇತೃತ್ವದಲ್ಲಿ ಕೂಲಿಕಾರರ ಪ್ರತಿಭಟನೆ

3 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಕಿ ಇರುವ ನರೇಗಾ ಕೂಲಿ ಹಣ ಬಿಡುಗಡೆ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಯನ್ನು ಕೈ ಬಿಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿAದ (ಎಐಕೆಕೆಎಂಎಸ್) ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಭವನ ಮೈದಾನದಿಂದ ಜಿಲ್ಲಾಽಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಅವರ ಮೂಲಕ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಕಳೆದ ವರ್ಷ ತೀವ್ರ ಬರ ಎದುರಿಸಿದ್ದೇವೆ. ಆದರೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರೈತರ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಸಾಕಷ್ಟು ಖರ್ಚು ಮಾಡಿ ಕೃಷಿ ಮಾಡಿದರೂ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲ. ಸಾಲದ ಬಾಧೆಗೆ ಸಿಲುಕಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ಸೂಕ್ತ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, ಜಮೀನುಗಳ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಸರ್ಕಾರದ ನೀತಿ ರೈತನ ಬದುಕನ್ನು ಭಯದಲ್ಲಿ ಮುಳುಗಿಸಿದೆ. ಮತ್ತೊಂದೆಡೆ ನರೇಗಾ ಯೋಜನೆಯಡಿ ಕೆಲಸ ನೀಡದಿರುವುದು, ದುಡಿದವರಿಗೆ ಹಣ ಬಿಡುಗಡೆಯಾಗದಿರುವುದು ಸಾಮಾನ್ಯವಾಗಿದೆ. 2 ತಿಂಗಳಿAದ ಕೂಲಿ ಹಣ ಬಿಡುಗಡೆಯಾಗದಿರುವುದು ಶೋಚನೀಯ ಸಂಗತಿ ಎಂದರು.
ಹನುಮೇಶ ಹುಡೇದ, ಮಾರುತಿ ಪೂಜಾರ , ಜಗದೀಶ ಪೂಜಾರ, ಗಿರಿಯಪ್ಪ ಪೂಜಾರ, ಬಸಪ್ಪ ಕರಿಕಟ್ಟಿ, ಮಡಿವಾಳಪ್ಪ, ನಗೀನಾ, ಸಲೀಂ, ನಾಗಪ್ಪ, ಮಂಜಳಾ ಜಗದಾಳೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net