ಮೀಸಲಿಟ್ಟಿರುವ ಅನುದಾನ ಬಿಡುಗಡೆಗೆ ಒತ್ತಾಯ

25Athanigrameen4
Published on

ಅಥಣಿ ಗ್ರಾಮೀಣ: ವೀರರಾಣಿ ಕಿತ್ತೂರ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಮೀಸಲಿಟ್ಟಿರುವ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಸಮಿತಿ ಅಧ್ಯಕ್ಷ ವಿಜಯ ಪವಾರ ಆಗ್ರಹಿಸಿದರು.

ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಎದುರು ಕನ್ನಡಪರ ಸಂಘಟನೆ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾ ಸೂರ್ಯವಂಶಿ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು.

ಈ ಮೊದಲು ಕಿತ್ತೂರ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ 5 ಲಕ್ಷ ರೂ. ಅನುದಾನ ಮೀಸಲಿಡುವಂತೆ ಗ್ರಾಪಂಗೆ ಮನವಿ ಸಲ್ಲಿಸಿದ್ದೇವು. ಆಗ ಆಡಳಿತ ಮಂಡಳಿಯವರು ಒಪ್ಪಿಗೆ ನೀಡಿ 5 ಲಕ್ಷ ರೂ ಅನುದಾನ ಮೀಸಲಿಟ್ಟಿದ್ದಾರೆ. ಆ ಅನುದಾನ ಕೂಡಲೇ ಬಿಡುಗಡೆ ಮಾಡಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರವೀಣಶೆಟ್ಟಿ ಬಣದ ಕರವೇ ಅಧ್ಯಕ್ಷ ದೀಪಕ ಬುರ್ಲಿ ಮಾತನಾಡಿ, ಗ್ರಾಪಂ 15ನೇ ಹಣಕಾಸು ಯೋಜನೆಯಡಿ ಕಿತ್ತೂರು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಐದು ಲಕ್ಷ ರೂಪಾಯಿ. ಹಣ ಮೀಸಲಿಟ್ಟಿರುವುದು ಶ್ಲಾಘನೀಯ ಎಂದರು.

ಪಿಡಿಒ ವಿದ್ಯಾ ಸೂರ್ಯವಂಶಿ ಮಾತನಾಡಿ, ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಜಿಪಂ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಹೈದರ್ ಬಾಲ್ದಾರ್, ಹನುಮಂತ ಪಾಟೀಲ, ಶಿವಾನಂದ ಖೋತ, ಪ್ರಲ್ಹಾದ ವಾಘಮೋರೆ, ಗುರಪ್ಪ ಮಗದುಮ್ಮ, ಸಿದ್ದಾರ್ಥ ಮಡ್ಡಿ, ರಮೇಶ ಅಥಣಿ, ರವಿ ಕವಲಗುಡ್ಡ, ಮುರಿಗೆಪ್ಪ ಹಲ್ಲೋಳಿ, ರಮೇಶ ಪಾಟೀಲ, ಪೈಗಂಬರ್ ಮುಲ್ಲಾ, ಕೃಷ್ಣಾ ದೊಡಮನಿ, ಅನಂತ ಜಾಧವ, ಸುಭಾಷ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net