ನಿವೇಶನ ಹಕ್ಕುಪತ್ರದ ಲೋಪದೋಷ ಸರಿಪಡಿಸಲು ಆಗ್ರಹ

1484d58e-adb2-44cb-a6a7-ebb42ab246d8
Published on

ಮಡಿಕೇರಿ: ಪಾಲೆಮಾಡು ನಿವಾಸಿಗಳಿಗೆ ವಿತರಿಸಿದ ಹಕ್ಕುಪತ್ರವನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ನಿವೇಶನ ಹಕ್ಕುಪತ್ರದ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಪಾಲೆಮಾಡು ಗ್ರಾಮಸ್ಥ ಪಿ.ಎ.ಧನಂಜಯ ಆಗ್ರಹಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೫ ರಿಂದಲೂ ಸರ್ಕಾರಿ ಜಾಗವಾದ ಸರ್ವೆ ನಂ ೧೬೭/೧ಎ ನಲ್ಲಿ ಪ್ಲಾಸ್ಟಿಕ್ ಗುಡಿಸಲು ಮನೆ ನಿರ್ಮಿಸಿ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದರೆ, ಮೂಲಕ ಭೂತ ಸೌಲಭ್ಯಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲಾಡಳಿ ಹಕ್ಕುಪತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪ್ರತೀ ನಿವೇಶನ ರಹಿತ ಕುಟುಂಬಗಳಿಗೂ ೪೦*೫೦ ಹಕ್ಕು ಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.


ಪಿ.ಬಿ.ರಾಜು ಮಾತನಾಡಿ, ರಾಜ್ಯ ಸರ್ಕಾರ ಉದ್ಯಮಿಗಳಿಗೆ ನೂರಾರು ಏಕರೆ ಸರ್ಕಾರಿ ಜಾಗವನ್ನು ನೀಡುತ್ತಿದೆ. ಒತ್ತುವರಿ ಜಾಗವನ್ನು ಮೂವತ್ತು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಶ್ರೀಮಂತರಿಗೆ ನೀಡಲು ಮುಂದಾಗಿದೆ. ಬಡವರು ಕನಿಷ್ಟ ಸೂರಿಗಾಗಿ ೯೪, ೯೪ಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಬಡವರಿಗೊಂದು, ಒತ್ತುವರಿದಾರರಿಗೊಂದು ನ್ಯಾಯ ಎನ್ನುವಂತೆ ವರ್ತಿಸುತ್ತಿದೆ. ಇದು ಸರಕಾರದ ಮಲತಾಯಿ ಧೋರಣೆಯಾಗಿದೆ ಎಂದು ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪಾಲೆಮಾಡು ನಿವಾಸಿಗಳಾದ ಎಚ್.ಜೆ.ವೀಣಾ, ಎಂ.ಆರ್.ಶೋಭ, ಪಿ.ಸಿ.ಸುರೇಶ್, ಕೆ.ಎ.ಅಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net