

ಹುಬ್ಬಳ್ಳಿ : ವಿವಿಧ ರೈಲುಗಳನ್ನು ಮರಳಿ ಪ್ರಾರಂಭಿಸುವಂತೆ ಹಾಗೂ ಪ್ರಯಾಣಿಕರಿಗೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ ಬಾಬುಲಾಲ್ ಜಿ. ಜೈನ್ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಬೆಳಗಾವಿ- ಬಧ್ರಾಚಲಮ್ ರೈಲು ಸಂಚಾರ ರದ್ದುಗೊಂಡಿದೆ. ಈ ರೈಲು ಹೊಸಪೇಟೆ ಮತ್ತು ಬಳ್ಳಾರಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಹೊಸಪೇಟ-ಬಳ್ಳಾರಿ-ಕೊಪ್ಪಳ ಮಾರ್ಗ ಬಹುದೊಡ್ಡ ಕೈಗಾರಿಕೆ ಮಾರ್ಗವಾಗಿದೆ ಹಾಗೂ ಹೈದ್ರಾಬಾದ್ನಿಂದ ವಿಮಾನ ಪ್ರಯಾಣ ಪ್ರಾರಂಭಿಸಲು ಅನೇಕರು ಈ ರೈಲನ್ನು ಬಳಸುತ್ತಿದ್ದರು. ಹೀಗಾಗಿ, ಈ ರೈಲು ಸಂಚಾರವನ್ನು ಮರಳಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಗುಂತಕಲ್ ರೈಲು ಸಂಚಾರ ಇದೀಗ ರೈಲ್ವೆ ಕಾಮಗಾರಿಯಿಂದಾಗಿ ತೋರಣಗಲ್ಲುವರೆಗೆ ಮಾತ್ರ ಸಂಚರಿಸುತ್ತಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣ ಈ ರೈಲು ಸಂಚಾರವನ್ನು ಗುಂತಕಲ್ವರೆಗೂ ಮರಳಿ ಪ್ರಾರಂಭಿಸಬೇಕು ಎಂದು ಮನವಿ ಮಾಡಲಾಯಿತು.
ರೈಲ್ವೆ ಕಾಮಗಾರಿಯಿಂದಾಗಿ ಗುಂಟೂರ ರೈಲ್ವೆ ವಿಭಾಗ ಹುಬ್ಬಳ್ಳಿ-ವಿಜಯವಾಡ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಕಾಮಗಾರಿಯನ್ನು ವೇಗವಾಗಿ ಮುಗಿಸಿ, ಶೀಘ್ರ ರೈಲು ಸಂಚಾರ ಮರಳಿ ಪ್ರಾರಂಭಿಸುವಂತೆ ಆಗ್ರಹಿಸಲಾಯಿತು.
ಮಳೆಯಿಂದಾಗಿ ಹೊಸಪೇಟ ರೈಲು ನಿಲ್ದಾಣದ ಛಾವಣಿ ಸೋರುತ್ತಿದೆ. ಅದನ್ನು ಸರಿಪಡಿಸುವಂತೆ ಆಗ್ರಹಿಸಲಾಯಿತು.
ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎ.ಕೆ. ಆದಪ್ಪಗೌಡರ ಹಾಗೂ ಝುಡ್ಆರ್ಯುುಸಿಸಿ ಮಾಜಿ ಸದಸ್ಯ ಭವರಲಾಲ್ ಸಿ. ಜೈನ್ ಹಾಜರಿದ್ದರು.