ಕೆಎಎಸ್​ ಮರು ಪರೀಕ್ಷೆಗೆ ಆಗ್ರಹ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಪಿಎಸ್​ಸಿ ವತಿಯಿಂದ ಇತ್ತೀಚೆಗೆ ನಡೆಸಿದ ಕೆಎಎಸ್​ ಪೂರ್ವಭಾವಿ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಲೋಪದೋಷಗಳಾಗಿದ್ದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವಂತೆ ಆಗ್ರಹಿಸಿ ಧಾರವಾಡದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳ ಒಕ್ಕೂಟ ವತಿಯಿಂದ ಸೋಮವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಒಟ್ಟು 200 ಪ್ರಶ್ನೆಗಳಲ್ಲಿ 50ಕ್ಕೂ ಹೆಚ್ಚು ಪ್ರಶ್ನೆಗಳು ಇಂಗ್ಲಿಷ್​ನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಸಂದರ್ಭದಲ್ಲಿ ಅನರ್ಥವಾಗಿವೆ. ಹೀಗಾಗಿ ಕೆಪಿಎಸ್​ಸಿ ಮರು ಪರೀಕ್ಷೆ ನಡೆಸಬೇಕು. ಮುಂಬರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ ಸಿದ್ಧಪಡಿಸಿ ನಂತರ ಇಂಗ್ಲಿಷ್​ ಗೆ ಭಾಷಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಕ್ಲಾಸಿಕ್​ ಸಂಸ್ಥೆ ಮುಖ್ಯಸ್ಥ ಲಕ್ಷ್ಮಣ್ ಉಪ್ಪಾರ, ಗುರುಕುಲ ಅಕಾಡೆಮಿಯ ಎನ್​.ಎಂ. ಪಾಟೀಲ, ಸ್ಪರ್ಧಾ ಜೀನಿಯಸ್​ ಅಕಾಡೆಮಿಯ ಸಿದ್ದಣ್ಣ ದಳವಾಯಿ, ಗುರುದೇವ ಅಕಾಡೆಮಿಯ ಶಂಕರ, ಪ್ರಗತಿ ಅಕಾಡೆಮಿಯ ಮಲ್ಲನಗೌಡ ಗುಬ್ಬಿ, ಎಂಜಿ ಅಕಾಡೆಮಿಯ ಲಗಮಣ್ಣ, ಬಸವರಾಜ ಜೇನಕಟ್ಟಿ, ರಾಜೇಂದ್ರಕುಮಾರ್​, ಶಿವರಾಜ ಬಡಿಗೇರ, ಪ್ರಕಾಶ್​ ಕಲ್ಲೋಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net