ಕಿರು ಸೇತುವೆ ಕಾಮಗಾರಿ ಶೀಘ್ರ ಮುಗಿಸಲು ಆಗ್ರಹ

MIRJAN PROTEST
Published on

ಅಂಕೋಲಾ: ಪುರಸಭೆ ವ್ಯಾಪ್ತಿಯ ಅಲಗೇರಿಗೆ ಸಾಗುವ ರಸ್ತೆಯಲ್ಲಿ ಜೊಗಳ್ಸೆ ಮತ್ತು ಕಂತ್ರಿ ಗ್ರಾಮದ ನಡುವೆ ಕೈಗೊಂಡ ಕಿರು ಸೇತುವೆ ಕಾಮಗಾರಿ ಬೇಗ ಮುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಕಂತ್ರಿಯಲ್ಲಿ ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿ ಭಾನುವಾರ ಪ್ರತಿಭಟನೆ ನಡೆಸಿದರು.

ಮೂರು ತಿಂಗಳಿಂದ 25 ಲಕ್ಷ ರೂ. ವೆಚ್ಚದಲ್ಲಿ ಈ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕುಂಟುತ್ತಾ ಸಾಗಿದೆ.

ಮಳೆಗಾಲ ಪ್ರಾರಂಭವಾದರೂ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರ ನಿರ್ಲಕ್ಷ್ಯ ತೋರಿದ್ದರಿಂದ ಸೇತುವೆ ಪಕ್ಕದ ಗದ್ದೆಯಲ್ಲಿ ಮಣ್ಣು ಹಾಕಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯೂ ಮಳೆ ನೀರಿಗೆ ಕೊಚ್ಚಿ ಹೋಗಿದೆ.

ಮನೆಗಳ ಮುಂದೆ ಹಾಗೂ ಕೃಷಿ ಭೂಮಿಯಲ್ಲಿ ನೀರು ತುಂಬಿದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಈ ಸೇತುವೆಯು ಅಂಕೋಲಾ ಪಟ್ಟಣಕ್ಕೆ ಸಂಬಂಧಿಸಿದ ಪ್ರಮುಖ ರಾಜಕಾಲುವೆಯಾಗಿದ್ದು ವಿಪರೀತ ಮಳೆಯಾದ ಕಾರಣ ನೀರಿನ ಸೆಳೆತ ಹೆಚ್ಚಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯೂ ಅರ್ಧ ಕೊಚ್ಚಿ ಹೋಗಿದೆ.

ಇಂತಹ ರಸ್ತೆಯಲ್ಲಿ ಜನರ ಸಂಚಾರ ಅಪಾಯಕಾರಿಯಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬಂದು ಸೇತುವೆಯ ಮೇಲಿಂದ ಸಂಚರಿಸಲು ಎರಡೂ ಕಡೆ ಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಿಬೇಕು ಎಂದು ಪಟ್ಟು ಹಿಡಿದರು.

ಪುರಸಭೆಯ ಜೆಸಿಬಿ ತರಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡಲು ಒಪ್ಪಿಗೆ ಮತ್ತು ಈ ಸ್ಥಳಕ್ಕೆ ಸೋಮವಾರ ಲೋಕೋಪಯೋಗಿ ಇಲಾಖೆ ಅಧಿಕಾರಿ ಭೇಟಿ ನೀಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆದರು.

ಸಂಜಯ ಮೋದಿ, ಮಂಜುನಾಥ ಜೆ.ಆಗೇರ, ರಾಘವೇಂದ್ರ ಆಗೇರಿ, ವಿದ್ಯಾ ಆಗೇರ, ಗಜಾನನ ನಾಯ್ಕ, ಗಣಪತಿ ನಾಯ್ಕ, ಬೊಮ್ಮಯ್ಯ ನಾಯಕ, ಆದಾಂ ಶೇಖ್, ನಿತ್ಯಾನಂದ ಕಿಂದೋಳಕರ, ಪ್ರವೀಣ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net