ಬಳ್ಳಾರಿ : ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಬೆಳೆದಿರುವ ಜೋಳವನ್ನು ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲು ವಿಳಂಬ ನೀತಿಯನ್ನು ಖಂಡಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕನ್ನಡ ನಾಡು ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡನಾಡು ರೈತ ಸಂಘದ ರಾಜ್ಯಾಧ್ಯಕ್ಷ ಎಂ.ಈಶ್ವರಪ್ಪ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಜೋಳ ಒಂದಾಗಿದೆ. ಡಿಸೆಂಬರ್ ತಿಂಗಳಲ್ಲಿ ಜೋಳವನ್ನು ಕಟಾವು ಮಾಡಲಾಗಿದ್ದು. ಬೆಳೆಯನ್ನು ರೈತರು ಮನೆಯ ಮುಂದೆ ಹಾಕಿಕೊಂಡಿದ್ದಾರೆ. ಅಲ್ಲದೇ, ಮುಂಗಾರ ಮಳೆ ಪ್ರಾರಂಭಗೊಂಡಲ್ಲಿ ರೈತರು ಬೆಳೆದಿರುವ ಬೆಳೆಯು ಸಂಪೂರ್ಣ ನಷ್ಟವಾಗುತ್ತದೆ. ಖರೀದಿ ಕೇಂದ್ರದಲ್ಲಿ ಜೋಳದ ನೊಂದಣಿ ಮಾಡಿ, ಜೋಳವನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.
ಇಲ್ಲದಿದ್ದರೇ ರೈತರು ತೊಂದರೆಗೆ ಒಳಗಾಗುತ್ತಿದ್ದಾರೆ. ಜೋಳವನ್ನು ಖರೀದಿಸಲು ಮುಂದಾಗದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.