ಉದ್ಯಾನಗಳ ರಕ್ಷಣೆಗೆ ಆಗ್ರಹ

Demand for protection of parks
ಅಮೀನಗಡದಲ್ಲಿ ಸಾರ್ವಜನಿಕ ಉದ್ಯಾನವನ ರಕ್ಷಿಸುವುದರ ಜತೆಗೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಕರವೇ ಘಟಕ ಪ್ರತಿಭಟನೆ ನಡೆಸಿ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಬಸವರಾಜ ಧಮರ್ಂತಿ, ರಂಜಾನ್ ನದ್ಾ, ರೋಹಿತ್ ಬಾರಕೇರ, ಅಶೋಕ ಪೂಜಾರಿ, ಮಹಾಂತೇಶಗೌಡ ವೆಂಕಲಕುಂಟಿ, ಶರಣಪ್ಪ ಹುಗ್ಗೆನವರ, ಚಂದ್ರು ಹಳ್ಳಿ, ಗಣೇಶ ನಾಯಕ, ಸೈಯದ್ ಬೇಪಾರಿ, ಜಹೀರ ಸಂಗಮಕರ, ರೀಯಾಜ್ ವಾಲಿಕಾರ, ರವಿ ಸಂದಿಮನಿ ಮತ್ತಿತರರಿದ್ದಾರೆ.
Published on

ಅಮೀನಗಡ: ಪಟ್ಟಣದ ಸಾರ್ವಜನಿಕ ಉದ್ಯಾನಗಳನ್ನು ರಕ್ಷಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕರವೇ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 1998 ರಿಂದ 2025ರವರೆಗೆ ಭೂ ಪರಿವರ್ತನೆಯಾದ ಜಾಗಗಳಲ್ಲಿನ ಸಂಖ್ಯೆಗಳ ಪ್ರಕಾರ ಇರಬೇಕಾದ ಉದ್ಯಾನಗಳಲ್ಲಿ ಕೆಲವು ಕಣ್ಮರೆಯಾಗಿದ್ದು, ಅವುಗಳನ್ನು ಪತ್ತೆ ಹಚ್ಚುವ ಕಾರ್ಯವಾಗಬೇಕಿದೆ. ಇನ್ನೂ ಕೆಲವು ಸಾರ್ವಜನಿಕರಿಂದ ಅತಿಕ್ರಮಣಗೊಂಡಿದ್ದು, ಅವುಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಹುನಗುಂದ ಕ್ಷೇತ್ರದ ಕರವೇ ಘಟಕದ ಅಧ್ಯಕ್ಷ ರಂಜಾನ್ ನದ್ಾ ಮಾತನಾಡಿ, ಪಟ್ಟಣದ ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಬೇಕು. ಕೆಲವೊಂದು ಉದ್ಯಾನಗಳು ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಪ್ರಭಾವಿಗಳ ಪಾಲಾಗಿವೆ. ಗ್ರಾಪಂ ವ್ಯಾಪ್ತಿಯಲ್ಲಿನ ಉದ್ಯಾನವನ ಮತ್ತು ನಾಗರಿಕರ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಜಾಗಗಳನ್ನು ಯಥಾಪ್ರಕಾರ ಕಾಯ್ದುಕೊಂಡು ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಹುನಗುಂದ ತಾಲೂಕು ಕರವೇ ಅಧ್ಯಕ್ಷ ರೋಹಿತ್ ಬಾರಕೇರ, ಇಳಕಲ್ಲ ನಗರದ ಕರವೇ ಅಧ್ಯಕ್ಷ ಅಶೋಕ ಪೂಜಾರಿ, ಕರವೇ ಘಟಕದ ಪದಾಧಿಕಾರಿಗಳಾದ ಮಹಾಂತೇಶಗೌಡ ವೆಂಕಲಕುಂಟಿ, ಶರಣಪ್ಪ ಹುಗ್ಗೆನವರ, ಚಂದ್ರು ಹಳ್ಳಿ, ಗಣೇಶ ನಾಯಕ, ಸೈಯದ್ ಬೇಪಾರಿ, ಜಹೀರ ಸಂಗಮಕರ, ರೀಯಾಜ್ ವಾಲಿಕಾರ, ರವಿ ಸಂದಿಮನಿ, ಮಂಜುನಾಥ ವಡ್ಡರ, ನರಸಪ್ಪ ಹಿರೇಮನಿ, ಬಸವರಾಜ ಅಂಬಿಗೇರ, ಮಹಾಂತೇಶ ಕಲಾದಗಿ, ಹುಸೇನ ಸಂದಿಮನಿ ಮತ್ತಿತರರಿದ್ದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯಾನಗಳ ದಾಖಲಾತಿ ಪರಿಶೀಲಿಸಿ ಅವುಗಳನ್ನು ಸಂರಕ್ಷಿಸುವ ಕ್ರಮ ಕೈಗೊಳ್ಳಲಾಗುವುದು. ಸುರೇಶ ಪಾಟೀಲ, ಮುಖ್ಯಾಧಿಕಾರಿ ಪಪಂ ಅಮೀನಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net