

ಚಿಕ್ಕಮಗಳೂರು: ಬಾಂಗ್ಲಾದಲ್ಲಿ ಮೀಸಲಾತಿ ವಿರುದ್ಧ ಆರಂಭಗೊAಡ ಹೋರಾಟ ಇದೀಗ ಹಿಂದೂಗಳ ವಿರುದ್ಧ ತಿರುಗಿದೆ. ಹೀಗಾಗಿ ಬಾಂಗ್ಲಾದಲ್ಲಿರುವ ಹಿಂದುಗಳು ಹಾಗೂ ಹಿಂದೂ ದೇವಾಲಯಗಳಿಗೆ ಕೇಂದ್ರ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಹರ್ಷವರ್ಧನ ಅವರ ಮೂಲಕ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದ ೨೭ ಸ್ಥಳಗಳಲ್ಲಿ ಹಿಂದುಗಳನ್ನು ಉz್ದೆÃಶಪೂರ್ವಕವಾಗಿ ಗುರಿಯಾಗಿಸಿಕೊಂಡು ಕೊಲ್ಲುವುದು, ಹಿಂದೂ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದೂ ದೇವಾಲಯಗಳನ್ನು ಕೆಡುವುವುದು ಮತ್ತು ಸುಡುವುದು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದರಿಂದಾಗಿ ಬಾಂಗ್ಲಾದಲ್ಲಿ ಹಿಂದುಗಳು ಆತಂಕದಲ್ಲೇ ಜೀವನ ನಡೆಸುವಂತಾಗಿದ್ದು, ಕೂಡಲೇ ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಕಾರ್ಪೊರೇಟರ್‌ಗಳು ಹಾಗೂ ಪತ್ರಕರ್ತರ ಕೊಲೆಯಾಗಿದೆ. ಬಾಂಗ್ಲಾದೇಶದ ಸೇನೆಯು ಹಿಂದುಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದರೂ, ಭಾರತ ಸರ್ಕಾರ ಅದರ ಮೇಲೆ ಅವಲಂಭಿತವಾಗದೆ ಹಿಂದೂ ಸಮಾಜ ಮತ್ತು ದೇವಾಲಯಗಳ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಿಸಲು ಅಲ್ಲಿನ ಸೇನೆಯು ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಬೇಕು. ಹಿಂದುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು ಮತ್ತು ಅವರಿಗೆ ತಕ್ಷಣದ ಭದ್ರತೆಯನ್ನು ಒದಗಿಸಬೇಕು. ಹಿಂದುಗಳ ಪ್ರಾಣ ಹಾನಿ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಅಲ್ಲಿನ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿವೇಕಾನಂದ ಯವಕ ಸಂಘದ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿಯ ಶಾರದಕ್ಕ, ಅಮಿತ್, ಸಪ್ನಾ ಶ್ರೇಷ್ಠಿ, ಬಸವರಾಜು ಮತ್ತಿತರರಿದ್ದರು.