ಕಾವೇರಿ ನದಿ ರಕ್ಷಣೆಗೆ ಆಗ್ರಹ

30sunti01
ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಪತ್ರ ಸಲ್ಲಿಸಿದರು.
Published on

ಸುಂಟಿಕೊಪ್ಪ; ಕಾವೇರಿ ನದಿಯ ಒಡಲಿಗೆ ಕಲುಷಿತ ನೀರನ್ನು ಬಿಡುವುದನ್ನು ತಡೆಗಟ್ಟಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ವಿದ್ಯಾರ್ಥಿನಿ ಶ್ರೀಶಾ ಎ.ಎಸ್.ಮನವಿ ಪತ್ರ ಸಲ್ಲಿಸಿದರು.

ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಸಂಸದರಿಗೆ ಮನವಿ ಸಲ್ಲಿಸಿ, ಕಾವೇರಿ ನದಿಯು ಇತ್ತೀಚಿನ ದಿನಗಳಲ್ಲಿ ಕಲುಷಿತಗೊಳ್ಳುತ್ತಿದೆ. ನದಿಯ ಶುದ್ಧತೆ ಕಾಯುವ ದಿಸೆಯಲ್ಲಿ ನದಿಗೆ ಕಲುಷಿತ ನೀರು ಬಿಡುವುದನ್ನು ತಡೆಗಟ್ಟುವಂತೆ ಪತ್ರದ ಮೂಲಕ ಮನವಿ ಮಾಡಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರಿಗೂ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಮನವಿ ಸಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net