ಸಿಎಂ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯಾಗದಿರಲಿ: ನಿವೃತ್ತ ಉಪನ್ಯಾಸಕ ಗೊರವಾಲೆ ಜಯಶಂಕರ್ ಆಗ್ರಹ

Demand for plastic bottle ban mandya
Published on

ಮಂಡ್ಯ: ನಗರದಲ್ಲಿ ಮಾ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿರುವ ಸಮಾವೇಶದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆಯಾಗದಂತೆ ಕ್ರಮ ವಹಿಸಬೇಕೆಂದು ಪರಿಸರ ಸಂರಕ್ಷಣಾ ಹೋರಾಟಗಾರ, ನಿವೃತ್ತ ಉಪನ್ಯಾಸಕ ಗೊರವಾಲೆ ಜಯಶಂಕರ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸರ್ಕಾರದಿಂದ ಆಯೋಜಿಸುವ ಸಭೆ, ಸಮಾರಂಭ ಹಾಗೂ ಕಚೇರಿಗಳಲ್ಲಿ ಏಕಕಾಲಿಕ ಬಳಕೆಯ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ/ಸರಬರಾಜನ್ನು ನಿಷೇಧಿಸಿ 2023 ಸೆ.19ರಂದು ರಾಜ್ಯ ಸರಕಾರ ಆದೇಶಿಸಿದೆ. ಈ ಆದೇಶವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಮಾವೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲಿಗೆ ಬರುವ ಜನರಿಗಾಗಿ ಪ್ಲಾಸ್ಟಿಕ್ ಬಾಟಲಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಆದರೆ, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಬದಲಿಗೆ 20 ಲೀಟರ್ ಕ್ಯಾನ್‌ಗಳಲ್ಲಿ ನೀರನ್ನು ಪೂರೈಸಲು, ಸ್ಟೀಲ್ ಲೋಟಗಳನ್ನು ವ್ಯವಸ್ಥೆ ಮಾಡಬೇಕು. ಈ ಮೂಲಕ ಪರಿಸರ ಮಾಲಿನ್ಯ ತಡೆಗೆ ಜಿಲ್ಲಾಡಳಿತ ಮುಂದಾಗಬೇಕೆಂದು ಸಲಹೆ ನೀಡಿದರು.

ಎಂ.ಬಿ.ರಮೇಶ್, ವೈ.ಎಂ.ರಮೇಶ್ ಮಲ್ಲಿಗೆರೆ, ಅನಿಲ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net