ಕಬ್ಬಿನ ಬಿಲ್ ಬಾಕಿ ಪಾವತಿಗೆ ಆಗ್ರಹ

Demand for payment of sugarcane bill arrears
ಕಬ್ಬಿನ ಬಾಕಿ ಬಿಲ್ ಕೊಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಗದ್ದನಕೇರಿ ಕ್ರಾಸ್‌ನಲ್ಲಿ ನಡೆಸಿದ ಪ್ರತಿಭಟನಾ ರ‌್ಯಾಲಿಯಲ್ಲಿ ರೈತ ಮುಖಂಡರೊಬ್ಬರು ರಸ್ತೆ ಮಧ್ಯ ಮಲಗಿ ಪ್ರತಿಭಟಿಸಿದರು.
Published on

ಕಲಾದಗಿ: ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬಿನ ಬಿಲ್‌ನ ಬಾಕಿಯನ್ನು ರೈತರಿಗೆ ಕೂಡಲೇ ಪಾವತಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗದ್ದನಕೇರಿ ಕ್ರಾಸ್‌ನಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ರ‌್ಯಾಲಿ ಮಾಡುವ ಉದ್ದೇಶದಿಂದ ಬೆಳಗ್ಗೆ 11 ಗಂಟೆಗೆ ಗದ್ದನಕೇರಿ ಕ್ರಾಸ್‌ಗೆ ಆಗಮಿಸಿದ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಯಲ್ಲಪ್ಪ ಹೆಗಡೆ ಮತ್ತಿತರ ಪ್ರತಿಭಟನಾಕಾರರು ಯಲ್ಲಾಲಿಂಗ ಮಠದ ಆವರಣದಲ್ಲಿ ಸಭೆ ನಡೆಸಿ ಹೋರಾಟದ ಕುರಿತು ಚರ್ಚಿಸಿ ಜಿಲ್ಲಾಧಿಕಾರಿಗಳ ಬಳಿಗೆ ತೆರಳುವ ನಿರ್ಧಾರ ಮಾಡಿದರು.

ನಂತರ ಗದ್ದನಕೇರಿ ಕ್ರಾಸ್‌ನಲ್ಲಿ ಮಾನವಸರಪಳಿ ನಿರ್ಮಿಸಿ ಕಾರ್ಖಾನೆಗಳ ಮಾಲೀಕರ ವಿರುದ್ಧ ದಿಕ್ಕಾರ ಕೂಗಿ ಬಿಲ್ ಪಾವತಿಸಿಸಲ ಆಗ್ರಹಿಸಿದರು. ರೈತ ಮುಖಂಡರೊಬ್ಬರು ರಸ್ತೆ ಮಧ್ಯೆಯೇ ಮಲಗಿ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು.

ಪೊಲೀಸರೊಂದಿಗೆ ವಾಗ್ವಾದ: ಪೋಲಿಸರು ಪ್ರತಿಭಟನಾಕಾರರನ್ನು ತಡೆದು, ಪೊಲೀಸ್ ವಾಹನಕ್ಕೆ ಹತ್ತಿಸಲು ಮುಂದಾದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕಾಟ-ತಳ್ಳಾಟ, ಮಾತಿನ ಚಕಮಕಿ ನಡೆಯಿತು.

ಎಲ್ಲಮ್ಮನ ಗುಡಿಯವರೆಗೆ ಪಾದಯಾತ್ರೆ ಮಾಡಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದತ್ತ ತೆರಳಿದರು. ಇದರಿಂದ ಗದ್ದನಕೇರಿ ಕ್ರಾಸ್‌ನಲ್ಲಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು.

ಡಿವೈಎಸ್‌ಪಿ ತುಕಾರಾಂ ಸುತಾರ, ಸಿಪಿಐ ಎಚ್.ಆರ್.ಪಾಟೀಲ, ತುಳಸಿಗೇರಿ, ಚಂದಪ್ಪ ಚಿಕ್ಕೊಡಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net